KSRTC ಬಸ್ ನಲ್ಲಿ ಜೋರಾಗಿ ಹಾಡು ಹಾಕಿದರೆ ಶಿಸ್ತು ಕ್ರಮ: ಶಿಕ್ಷೆ ಏನು ಗೊತ್ತಾ?
ಬೆಂಗಳೂರು: ಇನ್ನು ಮುಂದೆ ಕೆಎಸ್ಸಾರ್ಟಿಸಿ(KSRTC) ಬಸ್ ನಲ್ಲಿ ಇಯರ್ ಫೋನ್ ಇಲ್ಲದೇ ಜೋರಾಗಿ ಮೊಬೈಲ್ ನಲ್ಲಿ ಹಾಡು ಕೇಳುವಂತಿಲ್ಲ. ಜೋರಾಗಿ ಹಾಡು ಹಾಕಿ ಇತರ ಪ್ರಯಾಣಿಕರಿಗೆ ತೊಂದರೆ ನೀಡಿದರೆ, ಶಿಸ್ತು ಕ್ರಮವನ್ನು ಎದುರಿಸಬೇಕಾಗುತ್ತದೆ.
ಹೌದು…! ಈ ಸಂಬಂಧ ಸುತ್ತೋಲೆ ಹೊರಡಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಬಸ್ಗಳಲ್ಲಿ ಪ್ರಯಾಣಿಸುವಾಗ ಮೊಬೈಲ್ ಗಳಲ್ಲಿ ಜೋರಾಗಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕುವಂತಿಲ್ಲ ಎಂದು ಹೇಳಿದ್ದಾರೆ.
ಬಸ್ಸಿನೊಳಗೆ ಶಬ್ಧ ಮಾಲಿನ್ಯ ಉಂಟು ಮಾಡುವಂತಿಲ್ಲ. ಈ ರೀತಿಯ ಕೆಲಸ ಮಾಡಿದರೆ ಬಸ್ ಸಿಬ್ಬಂದಿ ಅಂತಹವರಿಗೆ ತಿಳಿವಳಿಕೆ ನೀಡಬೇಕು. ಒಂದು ವೇಳೆ ಸಿಬ್ಬಂದಿಯ ಮಾತಿಗೆ ಮನ್ನಣೆ ನೀಡದೇ ಉದ್ಧಟತನ ತೋರಿದರೆ, ಅಂತಹವರನ್ನು ಬಸ್ಸಿನಿಂದ ಇಳಿಸಬೇಕು. ಅವರು ಇಳಿಯುವವರೆಗೂ ಬಸ್ ನ್ನು ನಿಲ್ಲಿಸಬೇಕು. ಜೊತೆಗೆ ಅವರಿಗೆ ಪ್ರಯಾಣ ದರವನ್ನೂ ಹಿಂದಿರುಗಿಸಬಾರದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಈ ಸುತ್ತೋಲೆಯ ನಿರ್ದೇಶನಗಳು ತಕ್ಷಣದಿಂದಲೇ ಜಾರಿಗೆ ಬರುತ್ತವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ಯುವಕನನ್ನು ಹೆಗಲ ಮೇಲೆ ಹೊತ್ತು ರಕ್ಷಿಸಿದ ಮಹಿಳಾ ಇನ್ಸ್ ಪೆಕ್ಟರ್ ರಾಜೇಶ್ವರಿಗೆ ಸಿಎಂ ಸ್ಟಾಲಿನ್ ಅಭಿನಂದನೆ
ತಾಯಿ ಮೃತಪಟ್ಟರೂ ಗರ್ಭದಲ್ಲಿದ್ದ ಮಗುವನ್ನು ರಕ್ಷಿಸಿದ ವೈದ್ಯರು! | ಅಪರೂಪದ ಘಟನೆ
ತಲೆಗೆ ಗುಂಡು ಹಾರಿಸಿಕೊಂಡು ಕಾಂಗ್ರೆಸ್ ಶಾಸಕನ ಪುತ್ರ ಆತ್ಮಹತ್ಯೆ!
ಶಾಕಿಂಗ್ ನ್ಯೂಸ್: ಚಲಿಸುತ್ತಿದ್ದ ರೈಲಿನ ಮೇಲೆ ಉರುಳಿದ ಬಂಡೆಗಳು
ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತಿದ್ದೀರಿ | ಹೈಕೋರ್ಟ್ ಪ್ರಶ್ನೆ