ಕುಡಿದು ಬಂದು ಗಲಾಟೆ ಮಾಡಿದ ಗಂಡನನ್ನು ಈ ಮಹಿಳೆ ಮಾಡಿದ್ದೇನು ಗೊತ್ತಾ? - Mahanayaka
8:26 PM Wednesday 11 - December 2024

ಕುಡಿದು ಬಂದು ಗಲಾಟೆ ಮಾಡಿದ ಗಂಡನನ್ನು ಈ ಮಹಿಳೆ ಮಾಡಿದ್ದೇನು ಗೊತ್ತಾ?

06/03/2021

ಬಂಟ್ವಾಳ:  ಕುಡಿದು ಬಂದ ಗಂಡ ಗಲಾಟೆ ನಡೆಸಿದ್ದು, ಈ ವೇಳೆ ಪತ್ನಿ ಆಕ್ರೋಶಗೊಂಡು ಪತಿಯ ಹಣೆಗೆ ಕತ್ತಿಯಲ್ಲಿ ಹಲ್ಲೆ ನಡೆಸಿದ್ದು, ಪರಿಣಾಮವಾಗಿ ಪತಿ ಸಾವನ್ನಪ್ಪಿದ್ದಾರೆ.

50 ವರ್ಷ ವಯಸ್ಸಿನ ಉಮಾವತಿ ಪತಿಯನ್ನೇ ಹತ್ಯೆ ಮಾಡಿದ ಮಹಿಳೆಯಾಗಿದ್ದು,  60 ವರ್ಷ ವಯಸ್ಸಿನ ಸೇಸಪ್ಪ ಪೂಜಾರಿ ಹತ್ಯೆಗೀಡಾದ ಪತಿಯಾಗಿದ್ದಾರೆ.   ಕುಡಿದು ಬಂದು ಸೇಸಪ್ಪ ಪೂಜಾರಿ ಗಲಾಟೆ ನಡೆಸಿದ್ದು, ಈ ವೇಳೆ ಪತ್ನಿ ಕತ್ತಿಯಿಂದ ಪತಿಯ ಹಣೆಗೆ ಹಲ್ಲೆ ನಡೆಸಿದ್ದರು.  ಆದರೆ, ಆ ಬಳಿಕ ಅವರು ಚಿಕಿತ್ಸೆ ಪಡೆಯಲಿಲ್ಲ.

ವಿಪರೀತವಾಗಿ ರಕ್ತಸ್ರಾವವಾಗಿದ್ದರಿಂದಾಗಿ ಸೇಸಪ್ಪ ಪೂಜಾರಿ ಮನೆಯಲ್ಲಿಯೇ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.  ಘಟನೆ ಸಂಬಂಧ ಮೃತರ ಪುತ್ರಿ ಪೊಲೀಸರಿಗೆ ದೂರು ನೀಡಿದ್ದು, ಗ್ರಾಮಾಂತರ ಠಾಣಾ ಪೊಲೀಸರು ಆರೋಪಿ ಮಹಿಳೆಯನ್ನು ಶನಿವಾರ ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ