ಕುದಿಯುತ್ತಿದ್ದ ನೀರಿಗೆ ಬಿದ್ದು 2 ವರ್ಷದ ಮಗುವಿನ ದಾರುಣ ಸಾವು! - Mahanayaka

ಕುದಿಯುತ್ತಿದ್ದ ನೀರಿಗೆ ಬಿದ್ದು 2 ವರ್ಷದ ಮಗುವಿನ ದಾರುಣ ಸಾವು!

death
14/12/2021

ಮೈಸೂರು:  ಕುದಿಯುತ್ತಿದ್ದ ನೀರಿಗೆ ಆಕಸ್ಮಿಕವಾಗಿ ಬಿದ್ದು, 2 ವರ್ಷ ವಯಸ್ಸಿನ ಮಗು ಸಾವನ್ನಪ್ಪಿದ ದಾರುಣ ಘಟನೆ ನಡೆದಿದ್ದು, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ ಎಂದು ವರದಿಯಾಗಿದೆ.

ತಾಯಿ ಮನೆಯಿಂದ ಹೊರಗೆ ಇದ್ದ ಸಂದರ್ಭದಲ್ಲಿ ಮಗು ಮನೆಯೊಳಗಿದ್ದು, ಮಗು ಬಿಸಿ ನೀರಿಗೆ ತಲೆ ಕೆಳಗಾಗಿ ಬಿದ್ದಿದೆ ಎನ್ನಲಾಗಿದೆ. ಮಗುವಿನ ಕಿರುಚಾಟ ಕೇಳಿ ತಾಯಿ ಓಡಿ ಬಂದಿದ್ದು, ತಕ್ಷಣವೇ ಇಲ್ಲಿನ ಕೆ.ಆರ್.ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ. ಆದರೆ, ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.

ಪುಟ್ಟ ಮಕ್ಕಳ ಚಲನವಲನಗಳನ್ನು ಪೋಷಕರು ಗಮನಿಸಬೇಕು. ಅಪಾಯಕಾರಿ ಅನ್ನಿಸುವಂತಹ ಸ್ಥಳದಲ್ಲಿ ಮಕ್ಕಳನ್ನು ಇರಲು ಬಿಡಲೇ ಬಾರದು. ಇಂತಹ ಬಹಳಷ್ಟು ಘಟನೆಗಳು ನಡೆದರೂ ಪೋಷಕರು ಎಚ್ಚೆತ್ತುಕೊಳ್ಳುವುದಿಲ್ಲ. ಅನಾಹುತಗಳು ನಡೆಯಲು ಕೆಲವೇ ಕ್ಷಣಗಳು ಸಾಕು. ಹಾಗಾಗಿ ಪೋಷಕರು ತಮ್ಮ ಕೆಲಸಗಳಲ್ಲಿ ಎಷ್ಟೇ ಮಗ್ನರಾಗಿದ್ದರೂ ಎಚ್ಚರವಾಗಿರಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಡಾನ್ಸ್ ಬಾರ್ ನ ರಹಸ್ಯ ಕೋಣೆಯಲ್ಲಿ ಬಚ್ಚಿಡಲಾಗಿದ್ದ 17 ಯುವತಿಯರ ರಕ್ಷಣೆ!

ಬೆಂಗಳೂರು ನಗರ: ಕೆ.ಜಿ.ಎಫ್. ಬಾಬುಗೆ ಸೋಲು, ಬಿಜೆಪಿ ಅಭ್ಯರ್ಥಿ ಗೋಪಿನಾಥ್ ಗೆಲುವು

ಹಾಸನ: ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಭರ್ಜರಿ ಗೆಲುವು

ಬೀದರ್: ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಗೆ ಗೆಲುವು

ವಿಧಾನ ಪರಿಷತ್ ಚುನಾವಣೆ: ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು | ಎ.ಮಂಜು ಪುತ್ರಗೆ ಸೋಲು

ಗೋವುಗಳ ರಕ್ಷಣೆಗೆ ತಲ್ವಾರ್ ಖರೀದಿಸಿ: ಸಾಧ್ವಿ ಸರಸ್ವತಿ ಕರೆ

ಭಾರತದ ಹರ್ನಾಜ್ ಕೌರ್ ಸಂಧುಗೆ ಮಿಸ್ ಯುನಿವರ್ಸ್ ಕಿರೀಟ

ಇತ್ತೀಚಿನ ಸುದ್ದಿ