ಆತ್ಮಹತ್ಯೆ ಮಾಡಲು ನೀರಿಗೆ ಹಾರಿದ ಕುಡುಕನ ರಕ್ಷಣೆಗೆ ಹೋದ ಇಬ್ಬರು ಸಾವು | ಕುಡುಕ ಸೇಫ್! - Mahanayaka

ಆತ್ಮಹತ್ಯೆ ಮಾಡಲು ನೀರಿಗೆ ಹಾರಿದ ಕುಡುಕನ ರಕ್ಷಣೆಗೆ ಹೋದ ಇಬ್ಬರು ಸಾವು | ಕುಡುಕ ಸೇಫ್!

drown water
02/09/2021

ಅನಂತಪುರ: ಎಣ್ಣೆ ಏಟಿನಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಆತನನ್ನು ರಕ್ಷಿಸಲು ಹೋದ ಇಬ್ಬರು ನೀರು ಪಾಲಾಗಿದ್ದು, ಕುಡುಕ ಮಾತ್ರ ಸೇಫ್ ಆಗಿ ದಡ ಸೇರಿರುವ ಘಟನೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

ಕೃಷ್ಣಾ ಜಿಲ್ಲೆಯ ಜಿ.ಕೊಂಡೂರು ಮಂಡಲಂನ ಮುತ್ಯಾಲಂಪಾಡು ಗ್ರಾಮದ ನಿವಾಸಿ ಪ್ರವೀಣ್ ಮದ್ಯವ್ಯಸನಿಯಾಗಿದ್ದು,  ತನ್ನ ಕುಡಿತದ ಚಟದಿಂದಾಗಿ ಕುಟುಂಬದಿಂದ ದೂರವಿದ್ದ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ  ತನ್ನ ಸಂಬಂಧಿಕರ ಜೊತೆಗೆ ಈತ ಜಗಳವಾಡಿದ್ದು, ಮೊದಲೇ ತೀವ್ರವಾಗಿ ಮದ್ಯ ಸೇವಿಸಿದ್ದ ಆತ, ಸಂಬಂಧಿಕರ ಮೇಲೆ ತೀವ್ರವಾಗಿ ಕೋಪಗೊಂಡು ಗ್ರಾಮದ ಕೆರೆಗೆ ಹಾರಿದ್ದಾನೆ.

ಈತ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವುದನ್ನು ಕಂಡು ಅದೇ ಗ್ರಾಮದ ನಿವಾಸಿಗಳಾದ 19 ವರ್ಷ ವಯಸ್ಸಿನ ಚಿಲಪರವು ನಾನಿ ಹಾಗೂ  34 ವರ್ಷ ವಯಸ್ಸಿನ ಪಚ್ಚಗೋಳ್ಳ ಚಿನ್ನ ಕೋಟೋಶ್ವರರಾವು ಎಂಬ ಯುವಕರು ಆತನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ, ಕಳೆದ ಎರಡು ದಿನಗಳಲ್ಲಿ ಸುರಿದಿದ್ದ ಮಳೆಯಿಂದಾಗಿ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಈ ಇಬ್ಬರೂ ನೀರುಪಾಲಾಗಿದ್ದಾರೆ.

ಇತ್ತ ಆತ್ಮಹತ್ಯೆ ಮಾಡಿಕೊಳ್ಳಲೆಂದು ನೀರಿಗೆ ಹಾರಿದ್ದ ಪ್ರವೀಣ್ ಮಾತ್ರ ಕೆರೆಯಲ್ಲಿ ಈಜಿ ಮತ್ತೆ ಮೇಲೆದ್ದು ಬಂದಿದ್ದಾನೆ. ಆತನನ್ನ ರಕ್ಷಿಸಲೆಂದು ಹಾರಿದ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. ಬಹಳಷ್ಟು ಗಂಟೆಗಳ ಕಾಲ ಶೋಧ ನಡೆಸಿದ ಬಳಿಕ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿದೆ.

ಇನ್ನಷ್ಟು ಸುದ್ದಿಗಳು…

ಕೈಕೊಟ್ಟ ಕೇಂದ್ರ ಸರ್ಕಾರ: ಈ ಪ್ರಮುಖ 10 ಯೋಜನೆಗಳಿಗೆ ಬಿಡಿಗಾಸೂ ಬಿಡುಗಡೆಯಾಗಿಲ್ಲ!

ನೀರಿನ ಬಾಟಲಿಯೇ ಬೆಂಗಳೂರಿನ ಅಪಘಾತಕ್ಕೆ ಕಾರಣವಾಯ್ತೆ? | ಅಪಘಾತದ ವೇಳೆ ನಡೆದದ್ದೇನು?

ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ

ಶಾಕಿಂಗ್ ನ್ಯೂಸ್:  ಗ್ಯಾಸ್ ಬೆಲೆ 1 ಸಾವಿರದ ಗಡಿದಾಟುವ ಸಾಧ್ಯತೆ ಇದೆ!

ಆಟವಾಡುತ್ತಿದ್ದ ಬಾಲಕನ ಮೇಲೆ ಪೈಪ್ ಉರುಳಿಬಿದ್ದು ಬಾಲಕ ಸಾವು!

ಶಾಶ್ವತ ಸೂರಿಗಾಗಿ ರಸ್ತೆಯಲ್ಲಿ 6 ಕಿ.ಮೀ. ಉದ್ದಂಡ ನಮಸ್ಕಾರ ಹಾಕಿ ದಲಿತ ಮಹಿಳೆಯರು!

ಇತ್ತೀಚಿನ ಸುದ್ದಿ