ಶಾಕಿಂಗ್ ನ್ಯೂಸ್: ಕೊರೊನಾದಿಂದ ಕುಳಿತಲ್ಲೇ ಪ್ರಾಣ ಬಿಟ್ಟ ಗ್ರಾಮ ಪಂಚಾಯತ್ ಕಾರ್ಯದರ್ಶಿ - Mahanayaka
2:08 AM Thursday 12 - December 2024

ಶಾಕಿಂಗ್ ನ್ಯೂಸ್: ಕೊರೊನಾದಿಂದ ಕುಳಿತಲ್ಲೇ ಪ್ರಾಣ ಬಿಟ್ಟ ಗ್ರಾಮ ಪಂಚಾಯತ್ ಕಾರ್ಯದರ್ಶಿ

jayashankar narayana
01/05/2021

ಆಂಧ್ರಪ್ರದೇಶ: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ತಮ್ಮ ಕಚೇರಿಯಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟ ಬೆಚ್ಚಿಬೀಳಿಸುವ ಘಟನೆಯೊಂದು ಪಶ್ಚಿಮ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ ನಡೆದಿದೆ.

ಇಲ್ಲಿನ ಗುಂಡೆಪಲ್ಲೆ ತಾಲೂಕಿನ ಮಲ್ಲೆಪಲ್ಲೆ ಗ್ರಾಮದ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯಶಂಕರ್ ನಾರಾಯಣ ಎಂಬವರು ಮೃತಪಟ್ಟವರಾಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಜ್ವರದಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗಿದೆ. ಈ ಜ್ವರ ಸಾಮಾನ್ಯ ಜ್ವರ ಅಂದುಕೊಂಡು ಅವರು ನಿರ್ಲಕ್ಷ್ಯವಹಿಸಿದ್ದರು.

ಪ್ರತಿನಿತ್ಯವೂ ಕೆಲಸಕ್ಕೆ ಬರುವಂತೆಯೇ ಶುಕ್ರವಾರವೂ ಅವರು ಕೆಲಸಕ್ಕೆ ಆಗಮಿಸಿದ್ದಾರೆ. ಆದರೆ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಅವರು ಉಸಿರಾಟ ಸಮಸ್ಯೆಯಿಂದ ನರಳಾಡಿದ್ದಾರೆ. ಆದರೆ ಕಚೇರಿಯಲ್ಲಿದ್ದ ಯಾರು ಕೂಡ ಅವರ ಸಮೀಪಕ್ಕೂ ಹೋಗಲಿಲ್ಲ. ಕೆಲವೇ ಕ್ಷಣಗಳಲ್ಲಿ ಅವರು ಕುಳಿತುಕೊಂಡಿದ್ದ ಕುರ್ಚಿಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

ಘಟನೆಯ ಬಳಿಕ ಸಹೋದ್ಯೋಗಿಗಳು ಕಚೇರಿಯಿಂದ ಹೊರಗೆ ಹೋಗಿ ವೈದ್ಯರಿಗೆ ಕರೆ ಮಾಡಿದ್ದಾರೆ. ಪರೀಕ್ಷೆಯ ವೇಳೆ ಜಯಶಂಕರ್ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ.

ಇತ್ತೀಚಿನ ಸುದ್ದಿ