ಕುಮಾರಸ್ವಾಮಿ ಸಿಎಂ ಆದರೆ ಪಾದಯಾತ್ರೆ: ಹರಕೆ ಕಟ್ಟಿಕೊಂಡ ಅನ್ನದಾನಿ
ಚಾಮರಾಜನಗರ: ಮಂಡ್ಯ ಜಿಲ್ಲೆ ಮಳವಳ್ಳಿಯಿಂದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿರುವ ಶಾಸಕ ಅನ್ನದಾನಿ ಯಾತ್ರೆ ಇಂದು ಹನೂರು ಪಟ್ಟಣಕ್ಕೆ ಬಂದಿದ್ದು ತಾಳಬೆಟ್ಟದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮಾರ್ಗಮಧ್ಯೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೊರೊನಾ ವೇಳೆ ತಾಲೂಕಿನಲ್ಲಿ ಹೆಚ್ಚು ಸಾವು-ನೋವು ಆಗಬಾರದೆಂದು ಹರಕೆ ಕಟ್ಟಿಕೊಂಡಿದ್ದೆ, ಮಹದೇಶ್ವರನಿಗೆ ಮೊರೆ ಹೋಗಿದ್ದೆ, ಆ ಹರಕೆ ತೀರಿಸಲು ಯಾತ್ರೆ ಕೈಗೊಂಡಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಕುಮಾರಸ್ವಾಮಿ ರಾಜ್ಯದ ಸಿಎಂ ಆದರೆ ಮತ್ತೊಮ್ಮೆ ಕಾಲ್ನಡಿಗೆಯಲ್ಲಿ ಬರುವುದಾಗಿ ಹರಕೆ ಕಟ್ಟಿಕೊಳ್ಳುತ್ತನೆ ಎಂದಿದ್ದಾರೆ.
ಮಳವಳ್ಳಿ ಹಾಗೂ ಹನೂರಿನ್ನು ಒಂದು ಸೇತುವೆಯಷ್ಟೇ ಗಡಿಯಾಗಿದೆ. ಇಲ್ಲಿನ ಅಭ್ಯರ್ಥಿ ಮಂಜುನಾಥ್ ಗೆಲ್ಲಬೇಕು, ಕುಮಾರಸ್ವಾಮಿ ರಾಜ್ಯದ ಸಿಎಂ ಆಗಬೇಕೆಂದು ಹರಕೆ ಕಟ್ಟಿಕೊಳ್ಳಲಿದ್ದು, 104 ಕಿಮೀ ಮತ್ತೇ ಕಾಲ್ನಡಿಗೆಯಲ್ಲಿ ಬಂದು ಮಲೆ ಮಹದೇಶ್ವರನಿಗೆ ಪೂಜೆ ಸಲ್ಲಿಸುವುದಾಗಿ ತಿಳಿಸಿದರು.
ಇನ್ನು, ಶಾಸಕ ಅನ್ನದಾನಿ ಸೇರಿದಂತೆ ಯಾತ್ರಾರ್ಥಿಗಳಿಗೆ ಹನೂರಿನಲ್ಲಿ ಸ್ವಾಗತ ಕೋರಿ ಬೀಳ್ಕೊಡಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw