ಕುಮಾರಸ್ವಾಮಿಯ ದಾಖಲೆ ನನ್ನ ಬಳಿ ಇದೆ, ಗೌರವ ಇಲ್ಲದೇ ಮಾತನಾಡಿದ್ರೆ ಸುಮ್ನಿರಲ್ಲ | ಜಮೀರ್ ಎಚ್ಚರಿಕೆ - Mahanayaka
1:03 AM Wednesday 11 - December 2024

ಕುಮಾರಸ್ವಾಮಿಯ ದಾಖಲೆ ನನ್ನ ಬಳಿ ಇದೆ, ಗೌರವ ಇಲ್ಲದೇ ಮಾತನಾಡಿದ್ರೆ ಸುಮ್ನಿರಲ್ಲ | ಜಮೀರ್ ಎಚ್ಚರಿಕೆ

zameer khan
26/10/2021

ಹುಬ್ಬಳ್ಳಿ;  ಕುಮಾರಸ್ವಾಮಿ ಅವರಿಗೆ ಬೈಎಲೆಕ್ಷನ್ ಬಂದ್ರೆ ಮಾತ್ರ ಅಲ್ಪಸಂಖ್ಯಾತರು ನೆನಪಾಗ್ತಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ನೆನಪಾಗುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕುಮಾರಸ್ವಾಮಿ ನನಗೋಸ್ಕರ ಕಚೇರಿಯಲ್ಲಿ ಕುಳಿತಿದ್ದರು. ಗಂಟೆಗಟ್ಟಲೇ ನನ್ನ ಜೊತೆಯಲ್ಲೇ ಕುಳಿತುಕೊಳ್ಳುತ್ತಿದ್ದರು. ನಾನು ಲೆಕ್ಕ ನೋಡಿಕೊಳ್ಳಬೇಕು ನೀವು ಹೋಗಿ ಎನ್ನುತ್ತಿದ್ದೆ. ಇಲ್ಲಾ ನಿಮ್ಮ ಜತೆ ಇರಬೇಕೆಂದು ಇರುತ್ತಿದ್ದರು. ಈ ಮಾತು ನಾನು ಹೇಳಬೇಕಾದರೆ ಮನಸಿಗೆ ನೋವಾಗುತ್ತೆ. ಕುಮಾರಸ್ವಾಮಿ ನನಗೆ ಸ್ನೇಹಿತರಾಗಿದ್ದರು. ಅವರು ಈಗ ನನ್ನ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ ಎಂದು ಜಮೀರ್ ಬೇಸರ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಕೇವಲ ಅಲ್ಪಸಂಖ್ಯಾತರನ್ನು ಮುಗಿಸ್ತಿಲ್ಲ. ಒಕ್ಕಲಿಗರನ್ನು ಕೂಡ ಮುಗಿಸುತ್ತಿದ್ದಾರೆ. ನಾಯಕರು ಬೆಳೆಯುವುದನ್ನ ಕುಮಾರಸ್ವಾಮಿ ಸಹಿಸಲ್ಲ. ಕುಮಾರಸ್ವಾಮಿ ನನ್ನನ್ನು ಡ್ರೈವರ್ ಎಂದು ಕರೆಯುತ್ತಾರೆ. ಇವರಂತೆ ನಾನು ಬಿಬಿಎಂಯಲ್ಲಿ ಕಸ ಗುಡಿಸುತ್ತಿದ್ದೆನಾ? ಕುಮಾರಸ್ವಾಮಿ ಹೀಗೆ ಮಾತಾಡ್ತಾ ಇದ್ರೆ ಸುಮ್ಮನಿರಲ್ಲ. ಒಂದೊಂದೇ ವಿಚಾರವನ್ನು ಬಹಿರಂಗಪಡಿಸುತ್ತೇನೆ ಎಂದು ಅವರು ಎಚ್ಚರಿಗೆ ವಹಿಸಿದ್ದಾರೆ.

20-20 ಸರ್ಕಾರ ರಚನೆ ವೇಳೆ ಯಡಿಯೂರಪ್ಪಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಕುಮಾರಸ್ವಾಮಿಗೆ ಹೇಳಿದ್ದೆ. ಮಾತು ತಪ್ಪಬೇಡಿ ಕುಮಾರಸ್ವಾಮಿಯವರೇ ಎಂದು ಹೇಳಿದ್ದೆ. ಆದರೆ ಅವರು ಕೊಟ್ಟಿಲ್ಲ. ಈ ಬಗ್ಗೆ ದಾಖಲೆಗಳಿವೆ. ನಾನು ಮಾತನಾಡಿರುವುದು ಬಗ್ಗೆ ದಾಖಲೆಗಳಿವೆ ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಜಮೀರ್ ಹೆಗಲಿಗೆ ಬಂದೂಕು ಇರಿಸಿ ರಾಜಕೀಯವಾಗಿ ಅಲ್ಪಸಂಖ್ಯಾತರನ್ನು ಮುಗಿಸಲು ಯತ್ನ: ಶ್ರೀನಾಥ್ ಪೂಜಾರಿ

ಬಿಜೆಪಿಯ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು | ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

ಶಿಕ್ಷಣ ವ್ಯವಸ್ಥೆಗೆ ನನ್ನ ಬಲಿದಾನ ಎಂದು ವಿಡಿಯೋ ಮಾಡಿ ಯುವಕ ಆತ್ಮಹತ್ಯೆ!

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: ರಾಜ್ಯದಲ್ಲಿ ಶೀಘ್ರವೇ 5 ಸಾವಿರ ಶಿಕ್ಷಕರ ನೇಮಕಾತಿ

74 ವರ್ಷದ ವೃದ್ಧನಿಂದ ಬಾಲಕಿಯ ಅತ್ಯಾಚಾರ: ನೊಂದ ಬಾಲಕಿಯ ತಂದೆ ಆತ್ಮಹತ್ಯೆಗೆ ಶರಣು

ದಲಿತ ಬಾಲಕಿಯ ಅತ್ಯಾಚಾರ: ಪೊಲೀಸರು, ವೈದ್ಯಾಧಿಕಾರಿಗಳಿಂದ ಕರ್ತವ್ಯ ಲೋಪ | ಯುವ ಕಾಂಗ್ರೆಸ್ ಮುಖಂಡ ಲುಕ್ಮಾನ್ ಬಂಟ್ವಾಳ

 

ಇತ್ತೀಚಿನ ಸುದ್ದಿ