ಗೊತ್ತಿದೆ ಕಣಪ್ಪಾ ನಿನ್ನ ಬಂಡವಾಳ: ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಕೆಂಡಮಂಡಲ - Mahanayaka
5:17 PM Thursday 12 - December 2024

ಗೊತ್ತಿದೆ ಕಣಪ್ಪಾ ನಿನ್ನ ಬಂಡವಾಳ: ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಕೆಂಡಮಂಡಲ

h d kumaraswamy
02/03/2023

ಮೂಡಿಗೆರೆ: ಓರ್ವ ಮುಖ್ಯಮಂತ್ರಿಯನ್ನ ಚಪ್ರಾಸಿ ತರ ನಡೆಸಿಕೊಂಡಿರಿ, ಅವರು ಯಾರ ಪೂಜೆ ಮಾಡುತ್ತಿದ್ದಾರೆ, ಅವರು ರೈತನ ಮಗನಾ, ರೈತರ ಮಕ್ಕಳಿಗೆ ಇ.ಡಿ. ನೋಟಿಸು ಕೊಟ್ಟಿರುವುದನ್ನ ಎಲ್ಲಾದರೂ ನೋಡಿದ್ದೀರಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.

ಹಾಸನದಲ್ಲಿ ಡಿ.ಕೆ.ಶಿವಕುಮಾರ್  ನೀಡಿದ ಹೇಳಿಕೆಗೆ ಹೆಚ್. ಡಿ. ಕುಮಾರಸ್ವಾಮಿ ಕೆಂಡಮಂಡಲವಾಗಿದ್ದು, ನನ್ನನ್ನ ಯಾವ ರೀತಿ ನಡೆಸಿಕೊಂಡರು ಎಂಬುವುದು ಗೊತ್ತಿದೆ, ಇರಿಗೇಶನ್ ಸಚಿವನಾಗಿ ಏನೇನೋ ನಡೆಸಿದ್ದೀಯ ಗೊತ್ತಿದೆ ಕಣಪ್ಪಾ ನಿನ್ನ ಬಂಡವಾಳ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮಗೆ ಎಷ್ಟು ಸ್ವತಂತ್ರ ಕೊಟ್ಟಿದ್ದೆ, ನೀವು ಯಾವ ರೀತಿ ನಡೆಸಿಕೊಂಡಿರಿ, ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವಾ? ಹುಡುಕಿಕೊಂಡು ಬಂದವರು ನೀವು, ಸಿಎಂ ಸ್ಥಾನ ಕೊಡ್ತೀವಿ ಬನ್ನಿ ಅಂತ, ಬೇಡ ಯಾರನ್ನಾದ್ರು ಮಾಡಿಕೊಳ್ಳಿ ಅಂತ ಹೇಳುದ್ವಲ್ಲಾ ಅವರು ಜೀವಂತ ಇಲ್ವಾ, ನಿಮಗೆ ಶಕ್ತಿ ಇದ್ರೆ ಯಾಕೆ ಜೆಡಿಎಸ್ ನಾಯಕರುಗಳ ಮನೆಯ ಬಾಗಿಲನ್ನ ತಟ್ಕೊಂಡಿದ್ದೀರಾ? ನನ್ನ ಬಗ್ಗೆ ಲಘುವಾಗ ಮಾತನಾಡುತ್ತೀರಾ ಎಂದು ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಡಿಕೊಳ್ಳಿ ಅಂತ ನಾವು ಹೇಳಿಲ್ವಾ , ಜೀವಂತವಾಗಿ ಯಾರು ಬದುಕಿಲ್ವಾ, ದೇವೇಗೌಡರು ಸಮ್ಮುಖದಲ್ಲಿ ಮಾತನಾಡಿದ್ದನ್ನ ಹೇಳಲಿಕ್ಕೆ, ನಿಮಗೆ ಯಾವ ರೀತಿ ನೈತಿಕತೆ ಇದೆ ಜೆಡಿಎಸ್ ಬಗ್ಗೆ ಮಾತನಾಡಲಿಕ್ಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ