ಕುಮಾರಸ್ವಾಮಿಯನ್ನು ಕಪ್ಪು ಮಾಡಿ ದೇವರು ಭೂಮಿಗೆ ಕಳುಹಿಸಿದ್ದಾರೆ ಎಂದ ಜಮೀರ್

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ “ಕರಿಯ” ಎಂದು ಕರೆದ ವಿಚಾರವಾಗಿ ಬಹಳಷ್ಟು ಚರ್ಚೆಗಳು, ಟೀಕೆಗಳು ವ್ಯಕ್ತವಾದ ಬಳಿಕವೂ ಜಮೀರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಇರೋದೇ ಕಪ್ಪು. ಅವರನ್ನು ಕರಿಯ ಎಂದು ಕರೆಯದೇ ಬಿಳಿಯ ಎಂದು ಕರೆಯಲಾಗುತ್ತದೆಯೇ ? ನಾನು ಕರಿಯ ಎಂದು ಕರೆದದ್ದು ತಪ್ಪಾಗಿದ್ದರೆ, ಅವರು ನನ್ನ ಮೇಲೆ ದೂರು ನೀಡಲಿ ಎಂದು ಹೇಳಿದರು.
ನನ್ನ ನಿವಾಸದ ಮುಂದೆ ಎರಡು ಬಾರಿ ಜೆಡಿಎಸ್ ಕಾರ್ಯಕರ್ತರು ಬಂದು ಪ್ರತಿಭಟನೆ ಮಾಡಿದ್ದಾರೆ. ಅವರು ನನ್ನನ್ನು “ಕುಳ್ಳ” ಎಂದು ಕರೆದಿದ್ದಾರೆ. ದೇವರು ನನಗೆ ಹೈಟ್ ನೀಡಿಲ್ಲ, ಹಾಗಾಗಿ ಅವರು ಕುಳ್ಳ ಎಂದು ಕರೆದರೆ ನನಗೆ ಬೇಸರ ಇಲ್ಲ ಎಂದು ಜಮೀರ್ ಹೇಳಿದರು.
ಕುಮಾರಸ್ವಾಮಿ ವಿದೇಶದವರ ರೀತಿ ಇದ್ದಿದ್ದರೆ, ನಾನು ಅವರನ್ನು ಕರಿಯ ಎಂದು ಕರೆಯುತ್ತಿರಲಿಲ್ಲ. ದೇವರು ಅವರನ್ನು ಕಪ್ಪಾಗಿ ಮಾಡಿ ಭೂಮಿಗೆ ಕಳುಹಿಸಿದ್ದಾರೆ. ಹಾಗಾಗಿ ಅವರು ಕಪ್ಪಾಗಿದ್ದಾರೆ. ನನ್ನ ಹೇಳಿಕೆ ತಪ್ಪಾಗಲು ಹೇಗೆ ಸಾಧ್ಯ ಎಂದು ಜಮೀರ್ ಪ್ರಶ್ನಿಸಿದ್ದಾರೆ.