ಕುಂಭಮೇಳ ಆಯ್ತು ಇದೀಗ ಹೋಲಿ ಆಚರಣೆಯಲ್ಲೂ ಮುಸ್ಲಿಂ ವರ್ತಕರಿಗೆ ಅವಕಾಶ ನೀಡಬೇಡಿ ಎಂದ ಕೋಮುವಾದಿ ಗುಂಪುಗಳು

ಕುಂಭಮೇಳಕ್ಕೆ ಮುಸ್ಲಿಂ ವರ್ತಕರಿಗೆ ಪ್ರವೇಶ ನೀಡಕೂಡದು ಎಂದು ವಾದಿಸಿ ರಂಗಕ್ಕಿಳಿದಿದ್ದ ಕೋಮುವಾದಿ ಗುಂಪುಗಳು ಇದೀಗ ಮಥುರ ಮತ್ತು ಬೃಂದಾವನದಲ್ಲಿ ನಡೆಯಲಿರುವ ಬ್ರಿಜ್ಕಿ ಹೋಲಿ ಆಚರಣೆಗೂ ಮುಸ್ಲಿಂ ವರ್ತಕರಿಗೆ ಅವಕಾಶ ನೀಡಬಾರದು ಎಂದು ವಾದಿಸಿ ರಂಗಪ್ರವೇಶಿಸಿವೆ. ಮುಸ್ಲಿಮರು ತಿಂಡಿ ತಿನಿಸುಗಳಿಗೆ ಉಗಿಯುತ್ತಾರೆ ಮತ್ತು ರಾಸಾಯನಿಕ ಮಿಶ್ರಿತ ತಿಂಡಿಗಳನ್ನು ಮಾರಾಟ ಮಾಡುತ್ತಾರೆ ಎಂದು ಈ ಗುಂಪುಗಳು ಆರೋಪಿಸಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿರುವ ಶ್ರೀ ಕೃಷ್ಣ ಜನ್ಮಭೂಮಿ ಸಂಘ ಟ್ರಸ್ಟ್ ನ ಅಧ್ಯಕ್ಷ ದಿನೇಶ್ ಶರ್ಮ ಅವರು, ಮಹಾ ಕುಂಭಮೇಳದಂತೆ ಮುಸ್ಲಿಮರನ್ನು ಬ್ರಿಜ್ ಕಿ ಹೋಲಿ, ಆಚರಣೆಯಿಂದಲೂ ಹೊರಗಿಡಬೇಕು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಧರ್ಮ ರಕ್ಷಾ ಸಂಗ್ ನ ರಾಷ್ಟ್ರೀಯ ಅಧ್ಯಕ್ಷ ಸೌರವ್ ಗೌರ್ ಅವರು ಹೇಳಿಕೆಯನ್ನ ನೀಡಿದ್ದು ಮಥುರಾ ಮತ್ತು ಬೃಂದಾವನ, ಬರಸಾನ, ಗೋಕುಲ್, ದೌಜಿ ಮತ್ತು ಇತರ ಧಾರ್ಮಿಕ ಸ್ಥಳಗಳಲ್ಲಿ ಹೋಲಿ ಸಂಭ್ರಮದ ವೇಳೆ ಮುಸ್ಲಿಮರಿಗೆ ವ್ಯಾಪಾರ ಮಾಡುವುದಕ್ಕೆ ಅನುಮತಿಸಬಾರದು ಎಂದು ಹೇಳಿದ್ದಾರೆ. ಹೋಲಿಯಂತಹ ಪ್ರೀತಿ ಮತ್ತು ಸೌಹಾರ್ದದ ಆಚರಣೆಯಲ್ಲಿ ಮುಸ್ಲಿಮರು ಪ್ರವೇಶಿಸಿ ತೊಂದರೆ ಮಾಡುವುದನ್ನು ನಾವು ಬಯಸುವುದಿಲ್ಲ ಎಂದವರು ಹೇಳಿದ್ದಾರೆ.
ಮಥುರಾದ ಶಾಹಿ ಮಸೀದಿಯ ಮುಖ್ಯಸ್ಥರಾದ ತನ್ವೀರ್ ಅಹ್ಮದ್ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೋಲಿ ಆಚರಣೆಯ ವೇಳೆ ಹಿಂದೂ ಸಹೋದರರಿಗೆ ಮುಸ್ಲಿಮರು ಅಭಿನಂದನೆಯನ್ನು ಸಲ್ಲಿಸುವುದು ಇಲ್ಲಿನ ಸಾಂಪ್ರದಾಯಿಕ ನಡೆಯಾಗಿದೆ. ಅದನ್ನು ತಡೆಗಟ್ಟುವುದು ಮತ್ತು ವಿಭಜನವಾದಿ ಹೇಳಿಕೆಗಳನ್ನು ಕೊಡುವುದು ಖಂಡನೀಯ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj