ಕುನಾಲ್ ಕಮ್ರಾ ಹಾಸ್ಯ ವಿವಾದ: ಸ್ಟ್ಯಾಂಡಪ್ ಹಾಸ್ಯನಟನಿಗೆ ಎರಡನೇ ಸಮನ್ಸ್ ಜಾರಿ ಮಾಡಿದ ಪೊಲೀಸರು

27/03/2025

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ಹಾಸ್ಯ ಮಾಡಿದ್ದಕ್ಕಾಗಿ ಟೀಕೆಗೆ ಗುರಿಯಾಗಿರುವ ಹಾಸ್ಯನಟ ಕುನಾಲ್ ಕಮ್ರಾ ಅವರು ಮೊದಲ ಡೇಟ್ ಗೆ ಹಾಜರಾಗಲು ವಿಫಲವಾದ ನಂತರ, ಮುಂಬೈ ಪೊಲೀಸರು ಬುಧವಾರ ಎರಡನೇ ಸಮನ್ಸ್ ಹೊರಡಿಸಿದ್ದಾರೆ. ಕಮ್ರಾ ಯೂಟ್ಯೂಬ್ ನಲ್ಲಿ ತನ್ನ ಇತ್ತೀಚಿನ ಸ್ಟ್ಯಾಂಡ್-ಅಪ್ ವೀಡಿಯೊ “ನಯಾ ಭಾರತ್” ನಲ್ಲಿ ಏಕನಾಥ್ ಶಿಂಧೆ ಅವರನ್ನು “ಗಡ್ಡರ್” (ದೇಶದ್ರೋಹಿ) ಎಂದು ಉಲ್ಲೇಖಿಸಿದ್ದರು.

ಸ್ಟ್ಯಾಂಡಪ್ ಹಾಸ್ಯನಟ ಮೊದಲ ಡೇಟ್ ಗೆ ಹಾಜರಾಗಲು ಆಗಿರಲಿಲ್ಲ ಮತ್ತು ಅವರ ವಕೀಲರು ಏಳು ದಿನಗಳ ಕಾಲಾವಕಾಶ ಕೋರಿದ್ದರು. ಹೀಗಾಗಿ ಮುಂಬೈ ಪೊಲೀಸರು ಕಾನೂನು ಅಭಿಪ್ರಾಯವನ್ನು ಪಡೆದ ನಂತರ ಮತ್ತೊಂದು ದಿನಾಂಕವನ್ನು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಅಣಕಿಸುವ ಮೊದಲು, ಕಮ್ರಾ ಇತರ ಹಲವಾರು ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ವಿಡಂಬನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version