ಕುರಿ ಮಾಂಸ ಖರೀದಿಸದಿದ್ದಕ್ಕೆ ಮಗ, ಸೊಸೆ, ಮೊಮ್ಮಕ್ಕಳಿಗೆ ಬೆಂಕಿ ಹಚ್ಚಿ ಕೊಂದೆ ಎಂದ ಪಾಪಿ! - Mahanayaka
2:03 AM Wednesday 5 - February 2025

ಕುರಿ ಮಾಂಸ ಖರೀದಿಸದಿದ್ದಕ್ಕೆ ಮಗ, ಸೊಸೆ, ಮೊಮ್ಮಕ್ಕಳಿಗೆ ಬೆಂಕಿ ಹಚ್ಚಿ ಕೊಂದೆ ಎಂದ ಪಾಪಿ!

hameed
19/03/2022

ಇಡುಕ್ಕಿ:  ಕುರಿ ಮಾಂಸ ಖರೀದಿಸಲಿಲ್ಲ  ಎಂಬ ಕಾರಣಕ್ಕಾಗಿ ತನ್ನ ಮಗ ಸೇರಿ ನಾಲ್ವರನ್ನು  ಹತ್ಯೆ ಮಾಡಿರುವುದಾಗಿ ಕೇರಳದ ಹಮೀದ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.  ನಿನ್ನೆ ಮಗನಿಗೆ ಕುರಿ ಮಾಂಸ  ಖರೀದಿಸಲು ಹೇಳಿ ಕಳುಹಿಸಿದೆ.  ಆದರೆ ತನ್ನ ಮಗ ಅದಕ್ಕೆ ಒಪ್ಪಲಿಲ್ಲ,  ಜೈಲಿನಲ್ಲಿ ಕುರಿ ಮಾಂಸ ಸಿಗುತ್ತದೆ ಎಂಬ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಹಮೀದ್ ಪೊಲೀಸರಿಗೆ ತಿಳಿಸಿದ್ದಾನೆ.

ಆರೋಪಿ ಹಮೀದ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎರ್ನಾಕುಲಂ ರೇಂಜ್ ಡಿಐಜಿ ನೀರಜ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.  ಪ್ರಕರಣದಲ್ಲಿ ಬಲವಾದ ಸಾಕ್ಷ್ಯಾಧಾರಗಳು ಮತ್ತು ಸಾಕ್ಷಿಗಳಿದ್ದು, ಆರೋಪಿಯು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದಿಲ್ಲ ಎಂದರು.

ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.  ಮೃತರಲ್ಲಿ ಹಮೀದ್ ಅವರ ಪುತ್ರ ಮಹಮ್ಮದ್ ಫೈಸಲ್, ಸೊಸೆ ಶೀಬಾ ಮತ್ತು ಮೊಮ್ಮಕ್ಕಳಾದ ಮೆಹರು ಮತ್ತು ಆಸ್ನಾ ಸೇರಿದ್ದಾರೆ. ಹಮೀದ್ ಅವರ ಈ ಕೃತ್ಯಕ್ಕೆ ಇಡೀ ಊರೇ ಬೆಚ್ಚಿ ಬಿದ್ದಿದೆ.

ಮಗನ ಮನೆಗೆ ಬೆಂಕಿ ಹಚ್ಚಿದ ಹಮೀದ್ ಮಗ ಮತ್ತು ಕುಟುಂಬ ತಪ್ಪಿಸಿಕೊಳ್ಳದಂತೆ ಎಲ್ಲ ಪ್ಲಾನ್ ಮಾಡಿದ್ದ. ಈತನ ಪ್ಲಾನ್ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಮೊದಲು ಮನೆಯ ಟ್ಯಾಂಕ್ ನಲ್ಲಿದ್ದ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದ ಹಮೀದ್, ಮನೆಯ ಅಕ್ಕಪಕ್ಕ ಇದ್ದ ನೀರನ್ನೆಲ್ಲ ಚೆಲ್ಲಿದ್ದ, ಫ್ರೀಜರ್ ನಲ್ಲಿದ್ದ ನೀರನ್ನು ಕೂಡ ಚೆಲ್ಲಿದ್ದ. ಬಳಿಕ ಮಗ ಹಾಗೂ ಆತನ ಕುಟುಂಬ ಮಲಗಿದ್ದ ಕೊನೆಯನ್ನು ಹೊರಗಿನಿಂದ ಲಾಕ್ ಮಾಡಿದ್ದ. ಮನೆಗೆ ಕೂಡ ಹೊರಗಿನಿಂದ ಲಾಕ್ ಮಾಡಿದ್ದಾನೆ. ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾನೆ. ಬಳಿಕ ಮನೆಗೆ ಬೆಂಕಿ ಹಚ್ಚಿದ್ದಾನೆ.

ಬೆಂಕಿ ಹತ್ತಿ ಉರಿಯುತ್ತಿದ್ದಂತೆಯೇ ಅಕ್ಕಪಕ್ಕದ ಮನೆಯವರು ಓಡಿ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ, ಮನೆಯಲ್ಲಿ ಎಲ್ಲಿಯೂ ಒಂದು ತೊಟ್ಟು ನೀರು ಇರಲಿಲ್ಲ, ನೆರೆಯ ಮನೆ ವ್ಯಕ್ತಿ ಬಾಗಿಲು ಮುರಿದು ಮನೆಯೊಳಗೆ ಹೋಗಿದ್ದು, ಈ ವೇಳೆ ಅವರು ಸ್ಥಳದಲ್ಲಿ ನೀರಿಲ್ಲದ ಕಾರಣ ಅಸಹಾಯಕರಾಗಿ ನಿಲ್ಲುವಂತಾಗಿತ್ತು.

ಹಮೀದ್ ಇಷ್ಟೆಲ್ಲ ಒಬ್ಬನೇ ಸೇರಿ ಪ್ಲಾನ್ ಮಾಡಿದ್ದನೇ ಅಥವಾ ಇದರ ಹಿಂದೆ ಇನ್ನಷ್ಟು ಜನರ ಕೈವಾಡವಿದೆಯೇ ಎನ್ನುವುದು ತಿಳಿದು ಬಂದಿಲ್ಲ. ಆದರೆ ಈತನ ಕೃತ್ಯ ಎಲ್ಲರ ರಕ್ತ ಕುದಿಯುವಂತೆ ಮಾಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹೋಳಿ ಆಚರಣೆ ವೇಳೆ ಎದೆಗೆ ಚೂರಿಯಿಂದ ಇರಿದುಕೊಂಡು ಯುವಕ ಸಾವು

ಪುತ್ತೂರು: ಕೋಟಿ ಚೆನ್ನಯ ಜೋಡುಕರೆ ಕಂಬಳ | ಕಂಬಳದಿಂದ ಮನೋಸ್ಥೈರ್ಯ ವೃದ್ಧಿಸುತ್ತದೆ | ಕೇಶವ ಪ್ರಸಾದ್‌ ಮುಳಿಯ

ಜೀವ ಉಳಿಸಿದ ಆ್ಯಪಲ್​ ವಾಚ್

ಮಕ್ಕಳಿಗೆ ಬೇಕಿರುವುದು ಭವಿಷ್ಯ ರೂಪಿಸುವ ಶಿಕ್ಷಣ: ಎಚ್‌.ಡಿ.ಕುಮಾರಸ್ವಾಮಿ

ಬಂಗಾಳಕೊಲ್ಲಿಯಲ್ಲಿ ‘ಅಸನಿ’ ಚಂಡಮಾರುತ: ಹವಾಮಾನ ಇಲಾಖೆ ಮುನ್ಸೂಚನೆ

ಇತ್ತೀಚಿನ ಸುದ್ದಿ