ಕುರಿ ಮೇಯಿಸಲು ಹೋದ ಯುವಕನಿಗೆ ಎದುರಾದ ಚಿರತೆ | ಕೇವಲ ದಾಳಿ ನಡೆಸುತ್ತಿದ್ದ ಚಿರತೆ ಈಗ ಮಾಡಿದ್ದೇನು ಗೊತ್ತಾ? - Mahanayaka

ಕುರಿ ಮೇಯಿಸಲು ಹೋದ ಯುವಕನಿಗೆ ಎದುರಾದ ಚಿರತೆ | ಕೇವಲ ದಾಳಿ ನಡೆಸುತ್ತಿದ್ದ ಚಿರತೆ ಈಗ ಮಾಡಿದ್ದೇನು ಗೊತ್ತಾ?

01/01/2021

ಗಂಗಾವತಿ: ಕುರಿಮೇಯಿಸಲು ತೆರಳಿದ್ದ ಯುವಕನನ್ನು  ಚಿರತೆ ಕೊಂದು ಹಾಕಿದ ಘಟನೆ ಶುಕ್ರವಾರ ಮಧ್ಯಾಹ್ನ  ತಾಲೂಕಿನ ಆನೆಗೊಂದಿ ಕಿಷ್ಕಿಂದಾ ಪ್ರದೇಶದ ವಿರೂಪಾಪೂರಗಡ್ಡಿ ಬೆಟ್ಟದಲ್ಲಿ ನಡೆದಿದೆ.

ರಾಘವೇಂದ್ರ(18) ಮೃತಪಟ್ಟ ಯುವಕನಾಗಿದ್ದಾನೆ.  ಆನೆಗುಂದಿ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ಚಿರತೆ ದಾಳಿ ನಡೆಯುತ್ತಿದೆ. ಇದೀಗ 18 ವರ್ಷದ ಯುವಕನನ್ನು  ಚಿರತೆ ಕೊಂದು ಹಾಕಿದೆ.

ಆನೆಗುಂದಿ ಭಾಗದಲ್ಲಿ ಈವರೆಗೆ, ಜಂಗ್ಲಿ ರಂಗಾಪೂರದ ಮಹಿಳೆ ಹಾಗೂ ಹೈದ್ರಾಬಾದ್ ನ ಬಾಲಕನನ್ನು ಸೇರಿ ಜನ ಜಾನುವಾರುಗಳಿಗೆ ಚಿರತೆ ದಾಳಿ ನಡೆಸಿದ್ದು, ಈ ಬಾರಿ ನರ ಬಲಿ ಪಡೆದಿದೆ.

ಮೂರು ತಿಂಗಳಿನಿಂದ ಚಿರತೆಯನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ವಿಫಲವಾಗಿದೆ. ಸಿಸಿ ಕ್ಯಾಮರ ಅಳವಡಿಸಿದ್ದರೂ ಕೂಡ ಚಿರತೆ ಪತ್ತೆ ಸಾಧ್ಯವಾಗಿಲ್ಲ. ಪ್ರದೇಶದಲ್ಲಿ ಚಿರತೆ ಮಾತ್ರವಲ್ಲದೇ ಕರಡಿ ಹಾವಳಿಯೂ ಇದೆ.

ಇತ್ತೀಚಿನ ಸುದ್ದಿ