ಜಾತಿಯ ಕಾರಣಕ್ಕೆ ಜನರನ್ನು ದೂರವಿಟ್ಟ ಭಾರತದಲ್ಲಿ ಕುಷ್ಠ ರೋಗಿಗಳ ಸೇವೆ ಮಾಡಿದ ಮಹಾತಾಯಿ ಮದರ್ ತೆರೆಸಾ - Mahanayaka

ಜಾತಿಯ ಕಾರಣಕ್ಕೆ ಜನರನ್ನು ದೂರವಿಟ್ಟ ಭಾರತದಲ್ಲಿ ಕುಷ್ಠ ರೋಗಿಗಳ ಸೇವೆ ಮಾಡಿದ ಮಹಾತಾಯಿ ಮದರ್ ತೆರೆಸಾ

mother teresa
26/08/2021

ಜಾತಿತಾರತಮ್ಯ ಎಂದು, ಅಸ್ಪೃಶ್ಯತೆ ಎಂದು ತನ್ನ ಸಹಮಾನವನನ್ನೇ ಮುಟ್ಟದಂತ ಸ್ಥಿತಿ ಭಾರತದಲ್ಲಿದ್ದಾಗ ವಿದೇಶದಿಂದ ಬಂದ ಮಹಿಳೆಯೊಬ್ಬರು ಕುಷ್ಠರೋಗಿಗಳ ಸೇವೆ ಮಾಡುವ ಮೂಲಕ ಮಾನವೀಯತೆಯನ್ನು ಸಾರಿದರು. ಅವರು ಬೇರಾದೂ ಅಲ್ಲ ಮದರ್ ತೆರೆಸಾ. ಸುಮಾರು 45 ವರ್ಷಗಳಿಗೂ ಅಧಿಕ ಕಾಲ ಬಡವರ, ರೋಗಿಗಳ, ಅನಾಥರ ಮತ್ತು ಸಾವು ಬದುಕಿನ ನಡುವೆ ಹೋರಾಡುತ್ತಾ, ತಮ್ಮ ಕುಟುಂಬ, ಬಂಧು, ನೆಂಟರಿಷ್ಟು, ಧರ್ಮ ಮೊದಲಾದವುಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದವರ ಸೇವೆ ಮಾಡುತ್ತಾ ತಮ್ಮ ಜೀವನವನ್ನು ಕಳೆದವರು.

ಮದರ್ ತೆರೆಸಾ ಅವರು ಜನರ ಸೇವೆಯನ್ನು ತಾವು ನಂಬಿದ ಏಸು ಕ್ರಿಸ್ತರ ಹೆಸರಿನಲ್ಲಿ ನಡೆಸುತ್ತಿದ್ದಾಗ, ಜಾತಿ ಹೆಸರಿನಲ್ಲಿ ಜನರನ್ನು ದೂರವಿಟ್ಟ ವಿಕೃತರು, ಸಮಾನತೆ ಬಯಸದ ದುರ್ಜನರು, ತಾವು ಮಾತ್ರವೇ ಸುಖವಾಗಿ ಬದುಕಬೇಕು ಎಂದು ಹೊರಟ ಸ್ವಾರ್ಥಿಗಳುಮದರ್ ತೆರೆಸಾ ಅವರು ಮತಾಂತರ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿದರು. ಆದರೆ, ಜನರ ಸೇವೆಯಲ್ಲಿ ತೊಡಗಿದ್ದ ಮದರ್ ತೆರೆಸಾ ಇದ್ಯಾವುದಕ್ಕೂ ಪ್ರತಿಕ್ರಿಯಿಸದೇ ಜನರ ಸೇವೆಯಲ್ಲಿ ತಲ್ಲೀನರಾದರುಹೀಗೆ ಅವರ ಸೇವೆ ಮುಂದುವರಿದು 1970ರಲ್ಲಿ ಮದರ್ ತೆರೆಸಾ ಅವರು ಒಬ್ಬರು ಮಾನವತಾವಾದಿ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು.

ಮದರ್ ತೆರೆಸಾ ಅವರ ಸೇವೆಯನ್ನು ಗುರುತಿಸಿ, ವಿಶ್ವದ ಅತ್ಯುನ್ನತ ಪ್ರಶಸ್ತಿ ನೊಬೆಲ್ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಲಾಯಿತು. ಹಾಗೆಯೇ ಭಾರತ ಕೂಡ ಮದರ್ ತೆರೆಸಾ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಮದರ್ ತೆರೆಸಾ ಅವರು ಪ್ರಶಸ್ತಿಯನ್ನು ಎಂದಿಗೂ ಬಯಸಿರಲಿಲ್ಲ. ಯಾವುದೇ ಪ್ರಶಸ್ತಿಯಿಂದ ನಿರ್ಗತಿಕರು, ಅನಾಥರಿಗೆ ಏನಾದರೂ ಉಪಯೋಗ ಇದೆಯೇ ಎಂದು ಅವರು ಪ್ರಶ್ನಿಸುತ್ತಿದ್ದರು ಎನ್ನುವ ಅಂಶಗಳನ್ನು ಇಂದಿಗೂ ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಮದರ್ ತೆರೆಸಾ ಅವರಿಗೆ ನೀಡಲಾದ ಗೌರವವನ್ನು ಎಣಿಸಲು ಸಾಧ್ಯವಿಲ್ಲ.

ಏನೂ ಇಲ್ಲದವರಿಗೆ ತಾಯಿಯಾದ ತೆರೆಸಾ ಅವರು ತಮ್ಮ ನಿಧನದ ಅವಧಿಯ ಸಂದರ್ಭದಲ್ಲಿ 123 ದೇಶಗಳಲ್ಲಿ 610 ಮಿಷನರಿಗಳನ್ನು ಸ್ಥಾಪಿಸಿ, ವಿಶ್ವದಾದ್ಯಂತ  ನಿರ್ಗತಿಕರ, ಶೋಷಿತರ, ಬಡವರ ಸೇವೆ ಮಾಡಿದರು. 1983ರಲ್ಲಿ ಮದರ್ ತೆರೆಸಾ ಅವರು ಪೋಪ್ ಜಾನ್ ಪಾಲ್ ಅವರನ್ನು ರೋಮ್ ನಲ್ಲಿ ಭೇಟಿ ಮಾಡುವ ಸಂದರ್ಭದಲ್ಲಿ ಹೃದಯಾಘಾತಕ್ಕೀಡಾದರು. ಇವರು ಮತ್ತೆ ಎರಡನೇ ಬಾರಿ 1989ರಲ್ಲಿ ಹೃದಯಾಘಾತಕ್ಕೆ ಒಳಗಾದಾಗ ಇವರಿಗೆ ಕೃತಕ ಹೃದಯಕ್ಕೆ  ಕೃತಕ ಪೇಸ್ಮೇಕರ್ ಅನ್ನು ಅಳವಡಿಸಲಾಯಿತು. ನಡುವೆ ಅವರ ನ್ಯುಮೋನಿಯ(ಶ್ವಾಸಕೋಶದಲ್ಲಿ ಕಫ ತುಂಬಿಕೊಳ್ಳುವುದು)ದೊಂದಿಗೂ ಅವರು ಹೋರಾಡಿದರು. 1991ರಲ್ಲಿ ಅವರು ಮೆಕ್ಸಿಕೋದಲ್ಲಿ ಮತ್ತೊಮ್ಮೆ ಹೃದಯ ಸಂಬಂಧೀ ತೊಂದರೆಗೆ ಸಿಲುಕಿದರು. ಸಂದರ್ಭದಲ್ಲಿ ಅವರು, ಮಿಷನರೀಸ್ ಆಫ್ಚಾರಿಟಿ ಸಂಸ್ಥೆಯ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡಲು ಮುಂದಾದರುಆದರೆ, ಮಿಷನರಿಯ ನನ್ಗಳು ಗುಪ್ತ ಮತದಾನದಲ್ಲಿ ಮತ ಚಲಾಯಿಸಿ ತೆರೇಸಾ ತಮ್ಮ ಹುದ್ದೆಯಲ್ಲಿ ಮುಂದುವರಿಯುವಂತೆ ನೋಡಿಕೊಂಡರು.  1996 ಏಪ್ರಿಲ್ನಲ್ಲಿ ಮದರ್ತೆರೇಸಾ ಬಿದ್ದ ಪರಿಣಾಮವಾಗಿ ಅವರ ಕೊರೊಳ ಮೂಳೆ ಅಥವಾ ಕ್ಲಾವಿಕಲ್ಬೋನ್ಮುರಿಯಿತು. ಹೀಗೆ ಹಲವು ಸಂಕಷ್ಟಗಳನ್ನು ಎದುರಿಸಿದ ಮದರ್ ತೆರೆಸಾ ಅವರು 1997 ಸೆಪ್ಟೆಂಬರ್‌ 5ರಂದು ಇಹ ಲೋಕ ತ್ಯಜಿಸಿದರು.

ಇತ್ತೀಚಿನ ಸುದ್ದಿ