ಅಪಘಾತಕ್ಕೀಡಾದರೂ ತರಗತಿಗೆ ಹೋದ ಬಾಲಕ ಏಕಾಏಕಿ ಕುಸಿದು ಬಿದ್ದು ಸಾವು!
ಬೆಂಗಳೂರು: ಅಪಘಾತಕ್ಕೀಡಾದರೂ ಬಾಲಕನೋರ್ವ ತರಗತಿಗೆ ಬಂದು ಕುಳಿತಿದ್ದು, ವಿಷಯ ತಿಳಿದ ಶಿಕ್ಷಕರು ಬಾಲಕನಿಗೆ ಆರೈಕೆ ಮಾಡುತ್ತಿರುವಾಗಲೇ ಬಾಲಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಗರದ ಮುನ್ನೇಕೊಳಲು ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ರಾಜೇಶ್ ಮತ್ತು ಪ್ರಿಯಾ ದಂಪತಿಯ ಒಬ್ಬನೇ ಮಗ 7 ವರ್ಷ ವಯಸ್ಸಿನ ನಿತೀಶ್ ಕುಮಾರ್ ಮೃತಪಟ್ಟ ಬಾಲಕನಾಗಿದ್ದಾನೆ. ಬುಧವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಶಾಲೆಯ ಸಮೀಪ ನಡೆದುಕೊಂಡು ಬರುವಾಗ ರಸ್ತೆ ಬದಿ ಬಾಲಕ ನಿಂತಿದ್ದ. ಈ ವೇಳೆ ಶಾಲಾ ವಾಹನ ಬಂದು ಬಾಲಕನಿಗೆ ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ.
ಶಾಲಾ ವಾಹನ ಡಿಕ್ಕಿ ಹೊಡೆದಿದ್ದರೂ ಅಲ್ಲಿಂದ ತರಗತಿಗೆ ತೆರಳಿದ್ದ ವಿದ್ಯಾರ್ಥಿಗೆ ಶಿಕ್ಷಕರು ಆರೈಕೆ ಮಾಡಿದ್ದಾರೆ. ಈ ವೇಳೆ ಏಕಾಏಕಿ ಬಾಲಕ ಕುಸಿದು ಬಿದ್ದಿದ್ದುಮ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತಲೆಗೆ ಬಿದ್ದಿದ್ದ ಭಾರೀ ಏಟಿನಿಂದಾಗಿ ಚಿಕಿತ್ಸೆ ಫಲಿಸದೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಎಚ್ ಎಎಲ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka