ಒಂದರ ಹಿಂದೊಂದರಂತೆ ಕುಸಿದು ಸಾವನ್ನಪ್ಪಿದ 250 ಕುರಿಗಳು: ಮತ್ತೆ ಸಾಂಕ್ರಾಮಿಕ ರೋಗದ ಭೀತಿ - Mahanayaka
6:10 PM Wednesday 11 - December 2024

ಒಂದರ ಹಿಂದೊಂದರಂತೆ ಕುಸಿದು ಸಾವನ್ನಪ್ಪಿದ 250 ಕುರಿಗಳು: ಮತ್ತೆ ಸಾಂಕ್ರಾಮಿಕ ರೋಗದ ಭೀತಿ

24/02/2021

ಚಿತ್ರದುರ್ಗ: ಅಕಾಲಿಕ ಮಳೆಗೆ ನನೆದಿದ್ದ ಕುರಿಗಳು ಒಂದರ ಹಿಂದೊಂದರಂತೆ ಸಾವನ್ನಪ್ಪಿದ್ದು, ಸುಮಾರು 250 ಕುರಿಗಳು ಸಾವಿಗೀಡಾಗಿವೆ. ಕುರಿಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.  ಕುರಿಗಳು ಯಾವ ಕಾರಣಕ್ಕೆ ಸಾವನ್ನಪ್ಪುತ್ತಿವೆ ಎನ್ನುವುದು ಇನನೂ ತಿಳಿದು ಬಂದಿಲ್ಲ.

ತುಮಕೂರು ಜಿಲ್ಲೆಯ ಶಿರ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಕುರಿ ಸಾಕಣೆಕಾರರು ಕುರಿಗಳನ್ನು ಮೇಯಿಸುತ್ತಾ ಕಡೂರಿನ ಎರೆಹಳ್ಳಿ, ಹಲ್ಲೇಹಳ್ಳಿ, ಮೇಲೆಹಳ್ಳಿಗೆ ಬಂದಿದ್ದರು. ನಿನ್ನೆ ಸಂಜೆ ಕಡೂರಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಕುರಿಗಳು ತೀವ್ರವಾಗಿ ನನೆದಿದ್ದವು. ಮೂರು ನಾಲ್ಕು ಕುರಿಗಳು ಆರಂಭದಲ್ಲಿ ಸಾವನ್ನಪ್ಪಿದ್ದು, ಸಂಜೆಯ ವೇಳೆಗೆ 250 ಕುರಿಗಳು ಸಾವನ್ನಪ್ಪಿವೆ.

ಕುರಿಗಳ ಸಾವಿನಿಂದ ಸುಮಾರು 40-50 ಲಕ್ಷ ನಷ್ಟವಾಗಿದೆ. ಕಡೂರು ತಹಶೀಲ್ದಾರ್ ಹಾಗೂ ಪಶುವೈದ್ಯ ಸ್ಥಳಕ್ಕೆ ಭೇಟಿ ನೀಡಿ ಕುರಿಗಳ ಸಾವಿಗೆ ಕಾರಣ ಏನು ಎಂದು ಪರಿಶೀಲಿಸುತ್ತಿದ್ದಾರೆ. ಇನ್ನೂ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುರಿಗಳ ಸಾವಿಗೆ ಸಾಂಕ್ರಾಮಿಕ ರೋಗಗಳೇನಾದರೂ ಕಾರಣವಾಗಿದೆಯೇ ಎಂಬ ಆತಂಕವೂ ಸೃಷ್ಟಿಯಾಗಿದೆ. ಜೊತೆಗೆ ಕುರಿ ಸಾಕಣಿಕೆಗಾರರಿಗೆ ನಷ್ಟ ಪರಿಹಾರ ಕೂಡ ಸಿಗುವುದಿಲ್ಲ. ಯಾಕೆಂದರೆ ಈಗ ಇರುವುದು ಸಿದ್ದರಾಮಯ್ಯ ಸರ್ಕಾರ ಅಲ್ಲ. ಯಡಿಯೂರಪ್ಪ ಸರ್ಕಾರವಾಗಿದೆ.

ಸಿದ್ದರಾಮಯ್ಯ ಸರ್ಕಾರವು ಕುರಿ ಸತ್ತರೆ, 5 ಸಾವಿರ ರೂ. ಪರಿಹಾರ ನೀಡುತ್ತಿತ್ತು. ಆದರೆ ಇದನ್ನು ಯಡಿಯೂರಪ್ಪ ಸರ್ಕಾರ ಕಿತ್ತುಕೊಂಡಿದೆ. ಈ ಯೋಜನೆಯನ್ನು ರದ್ದುಪಡಿಸಲಾಗಿದೆ.ಇದರಿಂದಾಗಿ ಹೈನುಗಾರರ ಬದುಕು ಆತ್ಮನಿರ್ಭರ ಅಲ್ಲ ಆತ್ಮ ಬರ್ಬರವಾಗಿದೆ.

ಇತ್ತೀಚಿನ ಸುದ್ದಿ