ಕುಟುಂಬ ಸಮೇತ ಆತ್ಮಹತ್ಯೆ ಯತ್ನ: ಏಳು ವರ್ಷದ ಬಾಲಕಿ ಸಾವು - Mahanayaka

ಕುಟುಂಬ ಸಮೇತ ಆತ್ಮಹತ್ಯೆ ಯತ್ನ: ಏಳು ವರ್ಷದ ಬಾಲಕಿ ಸಾವು

mumbhi
02/06/2022

ಮುಂಬೈ: ಸಾಲಗಾರರ ಕಾಟ ತಾಳಲಾಗದೆ 50 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ವ್ಯಕ್ತಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಲು ಪ್ರಯತ್ನಿಸಿ, ಏಳು ವರ್ಷದ ಮಗಳನ್ನು ಕಳೆದುಕೊಂಡ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ

ರಿಯಾನ್‌ ಸ್ಟೀಫನ್‌ ಜೋಸೆಫ್‌ ಬ್ರಾಕೋ (37) ಈ ರೀತಿ ಮಾಡಿದ ವ್ಯಕ್ತಿ ಈತನ ಪತ್ನಿ ಪೂನಂ (30) ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಾಶಿಮಿರಾ ಠಾಣೆ ಪೊಲೀಸರು ಇಬ್ಬರ ವಿರುದ್ಧವೂ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಮೀರಾ ರಸ್ತೆಯ ವಿವಿಧ ಬಾರ್‌ ಗಳಲ್ಲಿ ಸುಮಾರು ₹ 6 ಲಕ್ಷ ಖರ್ಚು ಮಾಡಿದ್ದಾರೆ.ರಿಯಾನ್‌ ಸುಮಾರು 50 ಲಕ್ಷ ರೂ. ಸಾಲ ಹೊಂದಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅವರ ಸಾಲಗಾರರು ತಮ್ಮ ಹಣವನ್ನು ಮರಳಿ ಕೇಳುತ್ತಿದ್ದಂತೆ, ಅವರು ವಾಸವಿದ್ದ ಫ್ಲಾಟ್ ಅನ್ನು 30 ಲಕ್ಷಕ್ಕೆ ಮಾರಾಟ ಮಾಡಿ  ಸ್ವಲ್ಪ ಮೊತ್ತವನ್ನು ಹಿಂದಿರುಗಿಸಿದ್ದರು.ಆದರೆ ಬಾಕಿ ಮೊತ್ತವನ್ನು ಹಿಂದುರುಗಿಸಲಾಗದೆ ಬೇಸತ್ತು ಆತ್ಮಹತ್ಯೆ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ಬತ್ತಿದ ನದಿಯಡಿಯಲ್ಲಿ ಪತ್ತೆಯಾಯ್ತು 3,400 ವರ್ಷಗಳಷ್ಟು ಹಳೆಯ ನಗರ!

ಮದ್ಯದ ಮತ್ತಿನಲ್ಲಿ ಟ್ರಕ್ ಚಾಲನೆ: ಸರಣಿ ಅಪಘಾತ ನಡೆಸಿ ಚಾಲಕ ಪರಾರಿ!

ಪ್ರೇಮ ಪ್ರಸ್ತಾಪ ತಿರಸ್ಕರಿಸಿದ್ದಕ್ಕಾಗಿ ಬಾಲಕಿಗೆ 14 ಬಾರಿ ಇರಿದ ಪಾಪಿ!

ಸಚಿವ ನಾಗೇಶ್ ಮನೆಗೆ ಮುತ್ತಿಗೆ ಹಾಕಿ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿ ಆಕ್ರೋಶ

ಕೋಮುವಾದದ ಪ್ರಯೋಗಶಾಲೆಯಾಗಿ ಕರ್ನಾಟಕ: ಮುಸ್ಲಿಂ ಸಮಾವೇಶದಲ್ಲಿ ಕೇಳಿ ಬಂದ ಅಭಿಪ್ರಾಯಗಳೇನು?

 

ಇತ್ತೀಚಿನ ಸುದ್ದಿ