ಕುಟುಂಬ ರಾಜಕಾರಣವನ್ನು ಏಡ್ಸ್ ಗೆ ಹೋಲಿಸಿದ ಯತ್ನಾಳ್!
ಕಲಬುರಗಿ: ಕುಟುಂಬ ರಾಜಕಾರಣ ಎಲ್ಲಾ ಪಾರ್ಟಿಯಲ್ಲೂ ಏಡ್ಸ್ ರೋಗದಂತೆ ಹಬ್ಬಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಕುಟುಂಬ ರಾಜಕಾರಣ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಹೇಳಿದ್ದಾರೆ.
ಒಬ್ಬರೇ ನಾಯಕರ ಮನೆಯಲ್ಲಿ ನಾಲ್ಕು ನಾಲ್ಕು ಮಂದಿ ರಾಜಕೀಯ ಮಾಡುತ್ತಾರೆ. ನಾಯಕತ್ವ ಬದಲಾವಣೆ ಮಾಡುವುದು ಬಿಡುವುದು ಕೇಂದ್ರ ನಾಯಕತ್ವಕ್ಕೆ ಬಿಟ್ಟದ್ದು. ಎಲ್ಲಿ ಅವಶ್ಯಕತೆ ಬೀಳುತ್ತದೋ ಅಲ್ಲಿ ಬದಲಾವಣೆ ಮಾಡುತ್ತದೆ ಎಂದು ಯತ್ನಾಳ್ ಹೇಳಿದರು.
ನನ್ನ ಮೇಲೆ ಸ್ವಾಮೀಜಿಗಳ ಆಶೀರ್ವಾದ ಕಡಿಮೆಯಾಗಿದೆ ಎನ್ನುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಮಾತನಾಡಿದ ಯತ್ನಾಳ್, ಸ್ವಾಮೀಜಿಗಳ ಆಶೀರ್ವಾದ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಅವರ ಬೇಡಿಕೆ ಕೂಡ ಹೆಚ್ಚಾಗಿರುತ್ತದೆ. ಮನಸಿಗೆ ಬೇಜಾರಾದಾಗ ಒಂದೊಂದು ಮಾತು ಬರುತ್ತದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೆಲಸಕ್ಕೆ ಸೇರಿದ ದಿನವೇ ನರ್ಸ್ ಮೇಲೆ ಅತ್ಯಾಚಾರ, ಬರ್ಬರ ಹತ್ಯೆ!
ಬಸ್ಸಿನಿಂದ ಕೆಸರು ಹಾರಿದ್ದಕ್ಕೆ ಚಾಲಕನಿಗೆ ವ್ಯಕ್ತಿಯಿಂದ ಚಪ್ಪಲಿಯೇಟು!
ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಅವಘಡ: ಸ್ವಲ್ಪ ತಡವಾಗಿದ್ದರೆ ನಡೆಯುತ್ತಿತ್ತು ಭಾರೀ ದುರಂತ!
ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯ ವರ್ತನೆ: ಯುವಕ ಅರೆಸ್ಟ್