ಲಾಕ್ ಡೌನ್ ನಿಂದ ಆದ ಕುಟುಂಬ ಸಂಕಷ್ಟ ನೋಡಲಾಗದೇ ಸ್ವಂತ ಉದ್ಯಮ ಮಾಡಿದ 14ರ ಬಾಲಕ - Mahanayaka
6:04 PM Wednesday 30 - October 2024

ಲಾಕ್ ಡೌನ್ ನಿಂದ ಆದ ಕುಟುಂಬ ಸಂಕಷ್ಟ ನೋಡಲಾಗದೇ ಸ್ವಂತ ಉದ್ಯಮ ಮಾಡಿದ 14ರ ಬಾಲಕ

30/10/2020

ಮುಂಬೈ: ಕೊರೊನಾ ಎಂತಹ ಸಂದರ್ಭವನ್ನು ಸೃಷ್ಟಿಸಿದೆ ನೋಡಿ… ಅಮಾಯಕ ಮಕ್ಕಳು ಕುಟುಂಬದ ಜವಾಬ್ದಾರಿಯನ್ನು ಹೊತ್ತು ಕೊಳ್ಳುವ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಅತ್ತ ಶಾಲೆ ಇಲ್ಲ, ಇತ್ತ ಅಪ್ಪ ಅಮ್ಮನಿಗೆ ಸರಿಯಾದ ಕೆಲಸ ಇಲ್ಲ, ಕಡಿಮೆ ಸಂಬಳಕ್ಕೆ ದುಡಿಯುತ್ತಾರೆ ಎನ್ನುವ ಕಾರಣಕ್ಕೆ ಎಲ್ಲಾದರೂ ಮಕ್ಕಳಿಗೆ ಎಲ್ಲಾದರೂ ಕೆಲಸ ಸಿಕ್ಕಿದರೆ, ಬಾಲ ಕಾರ್ಮಿಕತನ ಅಪರಾಧವಾಗುತ್ತದೆ. ಇಂತಹದ್ದೆಲ್ಲ ಸಮಸ್ಯೆಗಳು ದಿನನಿತ್ಯ ವರದಿಯಾಗುತ್ತಲೇ ಇದೆ. ಇದೇ ಸಂದರ್ಭದಲ್ಲಿ  ಒಬ್ಬ ಹುಡುಗ ತನ್ನ ಕುಟುಂಬದ ಹೊರೆಯನ್ನು ಇಳಿಸಲು ಮುಂದಾಗಿದ್ದು, ಹೀಗೆ…


ಮುಂಬೈನ 14 ವರ್ಷದ ಬಾಲಕ ಸುಭಾನ್ ಇದೀಗ ತನ್ನ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಮುಂದಾಗಿದ್ದಾನೆ. ಸುಭಾನ್ ತಂದೆ 12 ವರ್ಷಗಳ ಹಿಂದೆ ತೀರಿ ಹೋಗಿದ್ದರು. ಆ ಬಳಿಕ ಸುಭಾನ್ ತಾಯಿ ಶಾಲೆಯೊಂದರ ಬಸ್ ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ಸಂದರ್ಭದಲ್ಲಿ ತಾಯಿಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.


ತಾಯಿ ಕೆಲಸ ಕಳೆದುಕೊಂಡು ಕುಟುಂಬ ನಿರ್ವಹಣೆಗೆ ಪಡುತ್ತಿದ್ದ ಕಷ್ಟವನ್ನು ನೋಡಲಾಗದೇ ಸುಭಾನ್, ತಾನು ನಾಗ್ಬಾಡ, ಬಿಂಡಿ ಬಝಾರ್ ಮೊದಲಾದ ಕಡೆಗಳಲ್ಲಿ ಚಹಾ ಮಾರಲು ಆರಂಭಿಸಿದ್ದಾನೆ. ಚಹಾದಿಂದ ದಿನಕ್ಕೆ 400 ರೂ. ಗಳಿಸುತ್ತಿರುವ ಸುಭಾನ್ ತನ್ನ ಆದಾಯವನ್ನು ತಾಯಿಯ ಕೈಗೆ ನೀಡುತ್ತಿದ್ದಾನೆ.


ಇನ್ನೂ “ನಾನು ಕೆಲಸ ಮಾಡುತ್ತಿದ್ದೇನೆ.  ನನ್ನ ಸಹೋದರಿ ಆನ್ ಲೈನ್ ಕ್ಲಾಸ್ ನಲ್ಲಿ ಅಧ್ಯಯನ ಮಾಡುತ್ತಿದ್ದಾಳೆ. ಶಾಲೆ ಆರಂಭವಾದ ತಕ್ಷಣ ನಾನು ಹೋಗುತ್ತೇನೆ ಎಂದು ಸುಭಾನ್ ಹೇಳಿದ್ದಾನೆ.


ಇತ್ತೀಚಿನ ಸುದ್ದಿ