ಬೆಚ್ಚಿಬೀಳಿಸಿದ ಘಟನೆ | ಕುಟುಂಬಸ್ಥರ ಎದುರೇ  16ರ ಬಾಲಕಿಯ ಮೇಲೆ 8 ಮಂದಿಯಿಂದ ಸಾಮೂಹಿಕ ಅತ್ಯಾಚಾರ - Mahanayaka
5:18 AM Wednesday 11 - December 2024

 ಬೆಚ್ಚಿಬೀಳಿಸಿದ ಘಟನೆ | ಕುಟುಂಬಸ್ಥರ ಎದುರೇ  16ರ ಬಾಲಕಿಯ ಮೇಲೆ 8 ಮಂದಿಯಿಂದ ಸಾಮೂಹಿಕ ಅತ್ಯಾಚಾರ

uttar pradesh
08/07/2021

ಬರೇಲಿ: ಯುವಕನೋರ್ವ ಮಹಿಳೆಯ ಜೊತೆಗೆ ಪರಾರಿಯಾಗಿದ್ದು, ಇದರಿಂದ ಕೋಪಗೊಂಡ ಮಹಿಳೆಯ ಸಹೋದರರು ಸೇರಿದಂತೆ 8 ಮಂದಿ, ಯುವಕನ 16 ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಸಿನ ತಂಗಿಯನ್ನು ಕುಟುಂಬಸ್ಥರ ಎದುರೇ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಅಮ್ರೋಹ ರೈಲು ನಿಲ್ದಾಣದ ಸಮೀಪ ಮನೆಯೊಂದರಲ್ಲಿ ನಡೆದಿದೆ.

ಆರೋಪಿಗಳ ಕುಟುಂಬದ ಮಹಿಳೆಯೊಂದಿಗೆ ಹುಡುಗಿಯ ಸಹೋದರ ಓಡಿ ಹೋಗಿದ್ದರಿಂದ ಅಸಮಾಧಾನಗೊಂಡಿದ್ದ ಅವರು ಇಬ್ಬರಿಗೂ ಹುಡುಕಾಟ ನಡೆಸಿದ್ದರು. ಜೂನ್ 28 ರಂದು ಪೋಷಕರೊಂದಿಗೆ ಬಾಲಕಿಯನ್ನು ಎಳೆದುಕೊಂಡು ಹೋಗಿದ್ದಾರೆ. ಪೋಷಕರ ಎದುರಲ್ಲೇ ಪರಾರಿಯಾಗಿದ್ದ ಮಹಿಳೆಯ ಸಹೋದರರು, ತಂದೆ ಮತ್ತು ಚಿಕ್ಕಪ್ಪಂದಿರು ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಸಾಮೂಹಿಕ ಅತ್ಯಾಚಾರದ ಬಳಿಕ ಜೂನ್ 29ರಂದು ಬಾಲಕಿ ಹಾಗೂ ಕುಟುಂಬಸ್ಥರನ್ನು ಆರೋಪಿಗಳು ಮನೆಯಿಂದ ಹೊರಗೆ ಕಳುಹಿಸಿದ್ದಾರೆ. ಈ ಬಗ್ಗೆ ದೂರು ನೀಡಿದರೆ, ಕೊಂದು ಹಾಕುವುದಾಗಿ ಕುಟುಂಬಸ್ಥರನ್ನು ಬೆದರಿಸಿದ್ದರು ಎಂದು ತಿಳಿದು ಬಂದಿದೆ.

ಇನ್ನೂ ಘಟನೆಯ ಬಳಿಕ ಬಾಲಕಿಯ ಕುಟುಂಬಸ್ಥರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರೂ ಕೂಡ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ.  ಬಾಲಕಿ ಹೇಳಿಕೆ ನೀಡಿದ ನಂತರ ಎಫ್‌ ಐಆರ್ ದಾಖಲಿಸಲಾಗಿದೆ. ಆರೋಪಿಗಳು ಪ್ರಭಾವಿಗಳಾಗಿದ್ದು, ನಮ್ಮ ಕಟುಂಬದ ಬೇರೆ ಹುಡುಗಿಯರಿಗೂ ಇದೇ ರೀತಿ ಮಾಡಬಹುದೆಂಬ ಆತಂಕದಲ್ಲಿವೆ ಎಂದು ಬಾಲಕಿಯ ಚಿಕ್ಕಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ