ರಂಝಾನ್ ನಲ್ಲಿ ಬೆಲೆ ಏರಿಕೆ ವಿಚಾರ: ಅಂಗಡಿ ಮಾಲೀಕರಿಗೆ ಕುವೈಟ್ ಸರ್ಕಾರದಿಂದ ಬಿಗ್ ಶಾಕ್!

ಸೀಸನ್ ಸಂದರ್ಭದಲ್ಲಿ ವಸ್ತುಗಳಿಗೆ ಬೆಲೆ ಏರಿಕೆ ಆಗುವುದು ಸಾಮಾನ್ಯವಾಗಿದೆ. ಅದರಲ್ಲೂ ರಮಝಾನ್ ಸಂದರ್ಭದಲ್ಲಿ ಇದು ಮಾಮೂಲಿ ಎನ್ನುವಂತಾಗಿದೆ. ಇದೀಗ ಕುವೈಟ್ ಸರಕಾರವು ಈ ರಮಝಾನ್ ನಲ್ಲಿ ಬೆಲೆ ಏರಿಕೆಯಾಗುವುದರ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿದೆ. ಸೆಂಟ್ರಲ್ ಮಾರ್ಕೆಟ್ ಗಳು, ಸಹಕಾರಿ ಸಂಸ್ಥೆಗಳು, ಮಾಂಸ, ಖರ್ಜೂರದ ಅಂಗಡಿಗಳು, ರೆಸ್ಟೋರೆಂಟ್ ಗಳು ಮತ್ತು ತರಕಾರಿ ಅಂಗಡಿಗಳು ಇತ್ಯಾದಿಗಳ ಮೇಲೆ ಸರಕಾರ ಗಮನ ಹರಿಸಲಿದೆ ಮತ್ತು ರಮಝಾನ್ ನಲ್ಲಿ ಬೆಲೆ ಏರಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಗುಣಮಟ್ಟದ ವಸ್ತುಗಳು ಎಂದು ಹೇಳಿ ನಕಲಿ ವಸ್ತುಗಳನ್ನು ಮಾರಾಟ ಮಾಡುವುದನ್ನು ತಡೆಯುವುದಕ್ಕೆ ಕುವೈಟ್ ಸರಕಾರ ನಿರ್ಧರಿಸಿದ್ದು ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗಳ ಮೇಲೆ ದಾಳಿ ನಡೆಸಿ ಪರಿಶೀಲಿಸುವ ಎಚ್ಚರಿಕೆಯನ್ನು ನೀಡಿದೆ. ಹೈಪರ್ ಮಾರ್ಕೆಟ್ ಗಳೂ ಸೇರಿದಂತೆ ಎಲ್ಲಾ ಅಂಗಡಿಗಳ ಮೇಲೆಯೂ ಸರಕಾರ ಗಮನಹರಿಸಲಿದ್ದು ಒಂದು ವೇಳೆ ತಪ್ಪೆಸಗಿರುವುದಾಗಿ ಕಂಡು ಬಂದರೆ ಅಂಗಡಿಯನ್ನು ಮುಚ್ಚಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj