ಕುವೈಟ್ ನಲ್ಲಿ ವೀಸಾ ನಿಯಮದಲ್ಲಿ ಬದಲಾವಣೆಗೆ ನಿರ್ಧಾರ

ಕುವೈಟನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಉದ್ದೇಶದ ಭಾಗವಾಗಿ ಕುವೈಟ್ ವೀಸಾ ನಿಯಮವನ್ನ ಬದಲಾಯಿಸಲು ನಿರ್ಧರಿಸಲಾಗಿದೆ. ವಿಸಿಟಿಂಗ್ ವೀಸಾಕ್ಕೆ ಹಲವು ಸಮಯದಿಂದ ಅನುಮತಿ ನಿರಾಕರಿಸುತ್ತಾ ಬಂದಿದ್ದ ಕುವೈಟ್,ಇತ್ತೀಚಿಗೆ ಇದರಲ್ಲಿ ಬದಲಾವಣೆಯನ್ನು ಮಾಡಿತ್ತು. ಇದೀಗ ಕುವೈಟನ್ನು ಪ್ರವಾಸಿ ತಾಣವಾಗಿ ಮಾಡುವ ಗುರಿಯೊಂದಿಗೆ ಇನ್ನಷ್ಟು ಬದಲಾವಣೆಗಳನ್ನ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ವೀಸಾ ವಿಷಯಲ್ಲಿ ಇನ್ನಷ್ಟು ಉದಾರನೀತಿಯನ್ನು ತಳೆಯಲಾಗುವುದು. ಕುವೈಟ್ ಗೆ ಭೇಟಿ ನೀಡಬಯಸುವ ಜಗತ್ತಿನ ಎಲ್ಲಾ ರಾಷ್ಟ್ರಗಳ ಜನರಿಗೂ ಟೂರಿಸಂ ಕ್ಷೇತ್ರದ ಬಾಗಿಲನ್ನು ಈಗಾಗಲೇ ತೆರೆದಿರುವುದಾಗಿ ಈ ವಿಭಾಗದ ಮುಖ್ಯಸ್ಥರಾದ ಬ್ರಿಗೇಡಿಯರ್ ಹಮದ್ ಅಲ್ ರುವೈಹ್ ಹೇಳಿದ್ದಾರೆ.
ಟೂರಿಸಮನ್ನು ಹೆಚ್ಚು ಗೊಳಿಸುವುದು, ಕುವೈಟ್ ಗೆ ಭೇಟಿ ನೀಡ ಬಯಸುವವರನ್ನು ಆಕರ್ಷಿಸುವುದು ಮತ್ತು ರೆಸಿಡೆನ್ಸಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡುವುದು ಮುಂತಾದ ಗುರಿಯೊಂದಿಗೆ ರೆಸಿಡೆನ್ಸಿ ಪ್ರಕ್ರಿಯೆಗಳು ಮತ್ತು ವಿಸಗಳನ್ನು ಪ್ರಸ್ತುತಪಡಿಸಲಾಗಿದೆ ಎಂದವರು ಹೇಳಿದ್ದಾರೆ.
52 ರಾಷ್ಟ್ರಗಳ ನಾಗರಿಕರಿಗೆ ಕುವೈಟ್ ವಿಮಾನ ನಿಲ್ದಾಣದಲ್ಲಿ ನೇರವಾಗಿ ವೀಸಾ ಲಭಿಸಲಿದೆ. ಜಿಸಿಸಿ ರಾಷ್ಟ್ರಗಳಲ್ಲಿ ವಾಸಿಸುತ್ತಿರುವವರಿಗೆ ಅರ್ಹತಾ ಮಾನದಂಡಗಳನ್ನು ಪಾಲಿಸಿ ಸುಲಭದಲ್ಲಿ ಟೂರಿಸ್ಟ್ ವಿಸಾ ಸಿಗಲಿದೆ. ವೀಸಾ ಅರ್ಜಿ ಲಭಿಸಿ ಒಂದು ನಿಮಿಷದಿಂದ 24 ಗಂಟೆಯ ಒಳಗೆ ವಿಸಾ ಅನುಮತಿಸುವ ನೀತಿಯನ್ನು ಆರಂಭಿಸಲಾಗಿದೆ ಎಂದವರು ಹೇಳಿದ್ದಾರೆ.
ಕುವೈಟ್ ಗೆ ಭೇಟಿ ನೀಡುವುದಕ್ಕೆ ಪ್ರೇರಣೆಯನ್ನು ನೀಡುವ ಉದ್ದೇಶದಿಂದಲೇ ಫ್ಯಾಮಿಲಿ, ಟೂರಿಸ್ಟ್ ಮತ್ತು ಉದ್ಯಮಗಳನ್ನು ನೀಡುವ ವಿಧಾನವನ್ನು ಸರಳಗೊಳಿಸಲಾಗಿದೆ. ಹೊಸ ರೆಸಿಡೆನ್ಸಿ ನಿಯಮವನ್ನು ಜಾರಿಗೊಳಿಸುವುದರೊಂದಿಗೆ ನಿಯಮ ಉಲ್ಲಂಘನೆಯ ಪ್ರಕರಣಗಳು ಗಣನೀಯವಾಗಿ ತಗ್ಗಿವೆ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj