ಪಿ.ಎಂ. ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ವಿವಿಧ ವಿಷಯಗಳ ಶಿಕ್ಷಕರ ನೇಮಕಾತಿ: ಅರ್ಜಿ ಸಲ್ಲಿಸಿ!

KVS Teachers Recruitment 2025 : ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವಂತಹ ಧಾರವಾಡದ ಪ್ರಧಾನಮಂತ್ರಿ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ 2025-26ರ ಸಾಲಿಗೆ ಖಾಲಿ ಇರುವಂತಹ ವಿವಿಧ ವಿಷಯಗಳ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಕೆಳಗೆ ನೀಡಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿದ್ದರೆ, ವಿದ್ಯಾಲಯದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನಂತರ 06ನೇ ಮಾರ್ಚ್ 2025 ರಂದು ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ವಿವರ :
* PGT ಹುದ್ದೆಗಳು – ಗಣಿತ, ಕಂಪ್ಯೂಟರ್ ವಿಜ್ಞಾನ, ಬೌತಶಾಸ್ತ್ರ, ರಸಾಯನಶಾಸ್ತ್ರ, ಜೀವ ಶಾಸ್ತ್ರ ಹಾಗೂ ಇಂಗ್ಲಿಷ್ ವಿಷಯದಲ್ಲಿ
* TGT ಹುದ್ದೆಗಳು – ಇಂಗ್ಲೀಷ್ ಹಿಂದಿ ಗಣಿತ ಸಮಾಜ ವಿಜ್ಞಾನ, ವಿಜ್ಞಾನ ಹಾಗೂ ಸಂಸ್ಕೃತ ವಿಷಯಗಳಲ್ಲಿ
* PRT, TGT ಹುದ್ದೆಗಳು – ಕನ್ನಡ, ಬಾಲವಾಟಿಕೆ ಶಿಕ್ಷಕರು, ಕ್ರೀಡಾ ತರಬೇತಿದಾರರು, 4 ಯೋಗ ತರಬೇತಿಗಾರರು, TGT-ಕುಶಲ ಶಿಕ್ಷಕರು (ಕಲಾ ಶಿಕ್ಷಣ), ನರ್ಸ, ಶೈಕ್ಷಣಿಕ ಸಲಹೆಗಾರರು, ವಿಶೇಷ ಶಿಕ್ಷಕರು
* ಕಂಪ್ಯೂಟರ್ ಬೋಧಕರು – ಪ್ರಾಥಮಿಕ ಮತ್ತು ಮಾಧ್ಯಮಿಕ
ಅರ್ಜಿ ಸಲ್ಲಿಸುವ ವಿವರ :
ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಶಾಲಾ ವೆಬ್‌ಸೈಟ್ ನ ಮೂಲಕ ಮೂಲಕ 05ನೇ ಮಾರ್ಚ್ 2025ರ ಒಳಗಾಗಿ ನೊಂದಾಯಿಸಿಕೊಂಡು ಅರ್ಜಿ ಸಲ್ಲಿಸಬೇಕು.
ನೇರ ಸಂದರ್ಶನಕ್ಕೆ ಹಾಜರಾಗಲು ಮಾಹಿತಿ :
3 ಸೆಟ್ ಸ್ವಧೃಢೀಕರಿಸಿದ ಸೂಕ್ತ ದಾಖಲಾತಿಗಳನ್ನು ಹಾಗೂ ಭರ್ತಿ ಮಾಡಿದ ಸ್ವವಿವರವನ್ನು ಸಂದರ್ಶನದ ಸಮಯದಲ್ಲಿ ಸಲ್ಲಿಸಬೇಕು. ಸ್ವವಿವರ ನಮೂನೆಯನ್ನು ಶಾಲೆಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ: https://dharwad.kvs.ac.in
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: