ನಡು ರಸ್ತೆಯಲ್ಲಿ ಕೈಕೊಟ್ಟ ಇಲೆಕ್ಟ್ರಿಕ್ ಬೈಕ್ ಗೆ ಬೆಂಕಿ ಇಟ್ಟ! - Mahanayaka
3:19 PM Thursday 12 - December 2024

ನಡು ರಸ್ತೆಯಲ್ಲಿ ಕೈಕೊಟ್ಟ ಇಲೆಕ್ಟ್ರಿಕ್ ಬೈಕ್ ಗೆ ಬೆಂಕಿ ಇಟ್ಟ!

e bike
27/04/2022

ಚೆನ್ನೈ:  ಇಲೆಕ್ಟ್ರಿಕ್ ಬೈಕ್  ನಡು ರಸ್ತೆಯಲ್ಲಿ ಕೈಕೊಟ್ಟಿದ್ದರಿಂದ ಆಕ್ರೋಶಗೊಂಡ ಬೈಕ್ ಸವಾರ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ತಮಿಳುನಾಡಿನ ಅಂಬೂರ್ ಬಳಿಯಲ್ಲಿ ನಡೆದಿದೆ.

ಪೃಥ್ವಿರಾಜ್‌ ಎಂಬವರು  ತನ್ನ ಓಲಾ ಎಸ್ 1 ಪ್ರೊ ಬೈಕ್ ಗೆ ಬೆಂಕಿ ಹಚ್ಚಿದ್ದು,   ಬಳಿಕ ಇದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇ-ಬೈಕ್ ಆಗಾಗ ಕೈಕೊಡುತ್ತಿತ್ತು. ಹಲವು ಬಾರಿ ಕಂಪೆನಿಯವರಿಗೆ ಕರೆ ಮಾಡಿ ದೂರು ನೀಡಿದರೂ  ಕಂಪೆನಿಯವರು ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಬೈಕ್ ಪೂರ್ಣ ಚಾರ್ಜ್‌ನಲ್ಲಿ 181 ಕಿಮೀ ಕ್ರಮಿಸುತ್ತದೆ ಎಂದು ಕಂಪನಿಯ ಹೇಳಿಕೆಗಳ ಹೊರತಾಗಿಯೂ, ಸುಮಾರು 50 ರಿಂದ 60 ಕಿಲೋಮೀಟರ್ ಓಡಿದ ನಂತರ ವಾಹನದ ಬ್ಯಾಟರಿ ಖಾಲಿಯಾಗುತ್ತಿದ್ದು, ನಡು ರಸ್ತೆಯಿಂದ ಬೈಕ್ ನ್ನು ತಳ್ಳಿಕೊಂಡು ಹೋಗುವ ಸ್ಥಿತಿಯನ್ನು ಆಗಾಗ ಅನುಭವಿಸಿದ್ದರು.

ಹಲವು ಬಾರಿ ಈ ಘಟನೆ ಮರುಕಳಿಸಿದ್ದರಿಂದ ಆಕ್ರೋಶಗೊಂಡ ಪೃಥ್ವಿರಾಜ್ ರಸ್ತೆ ಬರಿಯಲ್ಲಿ ತಮ್ಮ ಬೈಕ್ ಗೆ  ಬೆಂಕಿ ಹಚ್ಚಿ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕೂಡ  ಇ-ಬೈಕ್ ವಿರುದ್ಧ ಬಳಕೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದರು. ತನ್ನ ಇಲೆಕ್ಟ್ರಿಕ್ ಬೈಕ್ ನ್ನು ಕತ್ತೆಗೆ ಕಟ್ಟಿ ಎಳೆದುಕೊಂಡು ಹೋಗುವ ಮೂಲಕ ಕಂಪೆನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಥಕ್ಕೆ ವಿದ್ಯುತ್ ತಂತಿ ತಗುಲಿ;  11  ಮಂದಿ ಸಾವು

ನರ್ಸ್ ನ ಕೈಯಿಂದ ಜಾರಿ ಬಿದ್ದು ನವಜಾತ ಶಿಶು ಸಾವು!: ತಾಯಿಯ ಕಣ್ಣಮುಂದೆಯೇ ಘಟನೆ

ಇಫ್ತಾರ್ ಕೂಟದಲ್ಲಿ ಟೋಪಿ ಧರಿಸಲು ಹಿಂದೇಟು ಹಾಕಿದ ಪ್ರಜ್ವಲ್ ರೇವಣ್ಣ!

ತಕರಾರು ಯಾಕೆ ನೀವೇ ಸಿಎಂ ಆಗಿ ಬಿಡಿ ಎಂದ ಯತ್ನಾಳ್: ನಕ್ಕ ಬಸವರಾಜ್ ಬೊಮ್ಮಾಯಿ

ದಿವ್ಯಾ ಹಾಗರಗಿ ಜೊತೆ ಡಿಕೆಶಿ ಇರುವ ಫೋಟೋ ಟ್ವೀಟ್ ಮಾಡಿದ ಬಿಜೆಪಿ

ಇತ್ತೀಚಿನ ಸುದ್ದಿ