ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ವಿವಿಧ ಉದ್ಯೋಗಗಳು - Mahanayaka

ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ವಿವಿಧ ಉದ್ಯೋಗಗಳು

employment
16/04/2021

ಯಾದಗಿರಿ:  ಯಾದಗಿರಿ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆಯ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯ ನಿಧಿ ಯೋಜನೆಯಡಿ ಇಲಾಖೆಯಿಂದ ನೂತನ ಜವಳಿ ನೀತಿ ಯೋಜನೆಯಡಿ ಸೀವಿಂಗ್ ಮಷಿನ್ ಆಪರೇಟರ್ ತರಬೇತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿಗಳಿಗೆ ಸಹಾಯಧನಕಾಗಿ ಅರ್ಜಿ ಆಹ್ವಾನಿಸಲಾಗಿದೆ.


Provided by

ಅರ್ಹ ಮಹಿಳಾ ಅಭ್ಯರ್ಥಿಗಳು ಸೀವಿಂಗ್ ಮಷಿನ್ ಆಪರೇಟರ್ ತರಬೇತಿ ಪಡೆದ ಬಹುತೇಕ ಮಹಿಳೆಯರಿಗೆ ತಮ್ಮ ಸ್ವಗ್ರಾಮ ಅಥವಾ ವಾಸಿಸು ಊರುಗಳಲ್ಲಿ ಇರುವ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕೆಲಸ ಮಾಡಲಾಗದ ಗ್ರಾಮೀಣ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಅವಶ್ಯಕತೆ ಇರುತ್ತದೆ. ಒಂದು ಇಂಡಸ್ಟ್ರಿಯಲ್ ಹೈ ಸ್ಪೀಡ್ ಸೀವಿಂಗ್ ಮಷಿನ್ ಖರೀದಿಗೆ 30,000 ರೂ. ಶೇಕಡಾ 50% ರಷ್ಟು ಸಹಾಯಧನ ಒದಗಿಸಲಾಗುವುದು.

ಹೆಚ್ಚಿನ ಮಾಹಿತಿಗೆ ದೂ. 08473-253387, ಜವಳಿ ತನಿಖಾಧಿಕಾರಿ ಶಶಿಕಾಂತ ಆರ್. ಮೊ.ನಂ. 9066627296, ಸಹಾಯಕ ನಿರ್ದೇಶಕ ಅಜಿತ್ ಜಿ. ನಾಯಕ್ ಮೊ.ನಂ.9845906227 ಗೆ ಸಂಪರ್ಕಿಸುವAತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ