100 ಕೋಟಿ ಕ್ಲಬ್ ಸೇರಿದ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ
ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾವು 100 ಕೋಟಿ ಕ್ಲಬ್ ಸೇರಿಕೊಂಡಿದ್ದು, ಆರಂಭದಲ್ಲಿ ಸೋಲು ಕಂಡಿತು ಅಂದುಕೊಂಡಿದ್ದ ಚಿತ್ರ ಇದೀಗ ಯಶಸ್ವಿಯತ್ತ ಹೆಜ್ಜೆ ಇಟ್ಟಿದೆ.
ಇತ್ತೀಚೆಗೆ ಬಾಲಿವುಡ್ ನಲ್ಲಿ ಬಿಡುಗಡೆಯಾದ ಚಿತ್ರಗಳು ನಿರಂತರ ಸೋಲು ಅನುಭವಿಸುತ್ತಿದ್ದು, ದಕ್ಷಿಣ ಭಾರತದ ಚಿತ್ರಗಳ ಅಬ್ಬರಕ್ಕೆ ಬಾಲಿವುಡ್ ನ ಜನಪ್ರಿಯತೆ ಕಡಿಮೆಯಾಗುತ್ತಿದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು.
ಇನ್ನೂ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಅಮೀರ್ ಖಾನ್ ನಟನೆಗೆ ಮತ್ತೊಮ್ಮೆ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದೇಶದಲ್ಲಿ ಅಮೀರ್ ಖಾನ್ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಲಭಿಸಿದೆ.
ಆರಂಭದಲ್ಲಿ ಲಾಲ್ ಸಿಂಗ್ ಚಡ್ಡಾ ಚಿತ್ರವು ಗಳಿಕೆಯಲ್ಲಿ ಹಿಂದೆ ಬಿದ್ದಿತ್ತು. ಇದು ಬಲಪಂಥೀಯರ ಬಾಯ್ಕಾಟ್ ನಿಂದಾದ ಪರಿಣಾಮ ಎಂದು ಸಾಕಷ್ಟು ಚಿತ್ರ ವಿಮರ್ಶಕರು ವಿಶ್ಲೇಷಿಸಿದ್ದರು. ಆದರೆ, ಇತ್ತೀಚೆಗೆ ಬಲಪಂಥೀಯ ಪರ ನಟರಾದ ಅಕ್ಷಯ್ ಕುಮಾರ್ ನಟಿಸಿದ್ದ ಸಾಮ್ರಾಟ್ ಪೃಥ್ವಿರಾಜ್ ಚಿತ್ರ ಹಾಗೂ ಕಂಗನಾ ನಟಿಸಿದ್ದ ‘ಧಾಕಡ್’ ಚಿತ್ರಗಳು ಹೀನಾಯವಾಗಿ ಸೋತಿದ್ದವು. ಯಾರೂ ಬಾಯ್ಕಾಟ್ ಮಾಡಿ ಯಾವುದೇ ಸಿನಿಮಾವನ್ನು ಸೋಲಿಸಲು ಸಾಧ್ಯವಿಲ್ಲ. ಸಿನಿಮಾವು ಜನರಿಗೆ ಇಷ್ಟವಾಗುವಂತಹ ಕಥೆಯನ್ನು ಹೊಂದಿದ್ದರೆ, ಖಂಡಿತವಾಗಿಯೂ ಹಿಟ್ ಆಗುತ್ತದೆ ಎನ್ನುವುದು ವಾಸ್ತವವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka