ಕೇರಳದಲ್ಲಿ ಪೊಲೀಸರ ಮೇಲೆ ವಲಸೆ ಕಾರ್ಮಿಕರ ದಾಳಿ: ಪೊಲೀಸ್ ಜೀಪ್ ಅಗ್ನಿಗಾಹುತಿ
ಎರ್ನಾಕುಲಂ: ಪೊಲೀಸರು ಹಾಗೂ ವಲಸೆ ಕಾರ್ಮಿಕರ ನಡುವೆ ಘರ್ಷಣೆ ಸಂಭವಿಸಿದ್ದು, 15ಕ್ಕೂ ಹೆಚ್ಚು ಮಂದಿ ಪೊಲೀಸರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಕಿಳಕ್ಕಂಬಳಂ ಎಂಬಲ್ಲಿನ ಕಾರ್ಮಿಕರ ಶಿಬಿರದಲ್ಲಿ ಈ ಘಟನೆ ನಡೆದಿದ್ದು, ವಲಸೆ ಕಾರ್ಮಿಕರ ಆಕ್ರೋಶಕ್ಕೆ ಪೊಲೀಸ್ ಜೀಪ್ ಬೆಂಕಿಗಾಹುತಿಯಾಗಿದೆ.
ಕೈಟೆಕ್ಸ್ ಎನ್ನುವ ಸಂಸ್ಥೆಗೆ ಸೇರಿದ ಕಾರ್ಮಿಕರ ವಸತಿ ಶಿಬಿರದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಮಧ್ಯ ಪ್ರವೇಶಿಸಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆಯೇ ವಲಸೆ ಕಾರ್ಮಿಕರು ತಿರುಗಿಬಿದ್ದಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಗೆ ಕಚ್ಚಿದ ಹಾವು!
ಕೃಷಿ ಕಾಯ್ದೆ ವಾಪಸ್ ಹೇಳಿಕೆ ನೀಡಿಯೇ ಇಲ್ಲ: ಕೇಂದ್ರ ಸಚಿವ ತೋಮರ್
15ರಿಂದ 18 ವರ್ಷದೊಳಗಿನವರಿಗೆ ಜನವರಿ 3ರಿಂದ ಲಸಿಕೆ ವಿತರಣೆ ಆರಂಭ | ಪ್ರಧಾನಿ ಮೋದಿ
ಒಮಿಕ್ರಾನ್ ಭೀತಿ: ಡಿಸೆಂಬರ್ 28ರಿಂದ 10 ದಿನಗಳ ಕಾಲ ರಾಜ್ಯದಲ್ಲಿ ನೈಟ್ ಕರ್ಫ್ಯೂ!
ಅತಿಥಿ ಉಪನ್ಯಾಸಕರೊಂದಿಗೆ ವಿದ್ಯಾರ್ಥಿಗಳು: ಹೋರಾಟಕ್ಕೆ ಕ್ಯಾಂಪಸ್ ಫ್ರಂಟ್ ತೀರ್ಮಾನ
ಮುಸ್ಲಿಮರನ್ನು, ಕ್ರೈಸ್ತರನ್ನು ಘರ್ ವಾಪಸಿ ಮಾಡದೇ ಬೇರೆ ದಾರಿಯಿಲ್ಲ | ಸಂಸದ ತೇಜಸ್ವಿ ಸೂರ್ಯ
ಕಳೆದ 7 ವರ್ಷಗಳಿಂದ ಮೋದಿ ಸರ್ಕಾರ ‘ಉತ್ತಮ ಆಡಳಿತ’ ನೀಡುತ್ತಿದೆ | ಅಮಿತ್ ಶಾ