ಲೈಂಗಿಕ ಬಯಕೆ ಈಡೇರಿಸಲು ಹೋಗುತ್ತಿದ್ದ ಪುರುಷರಿಗೆ ಬಿಗ್ ಶಾಕ್ ನೀಡುತ್ತಿದ್ದ ಮಹಿಳೆಯರು !

honey trap
19/08/2021

ಚಿಕ್ಕಮಗಳೂರು: ಪುರುಷರ ವೀಕ್ ನೆಸ್ ಗಳನ್ನು ಬಳಸಿಕೊಂಡು ತಂಡವೊಂದು ಹನಿ ಟ್ರಾಪ್ ಮೂಲಕ ಲಕ್ಷಾಂತರ ರೂಪಾಯಿಗಳನ್ನು ದೋಚುತ್ತಿದ್ದ ಪ್ರಕರಣ ಪತ್ತೆಯಾಗಿದ್ದು,  ಪುರುಷರು ಹಾಗೂ ಮಹಿಳೆಯರನ್ನೊಳಗೊಂಡ ಗ್ಯಾಂಗ್ ವೊಂದು ಹೆಣ್ಣಿನ ವಿಚಾರದಲ್ಲಿ ವೀಕ್ ಆಗಿರುವಂತಹ ಹಣವಂತ ಪುರುಷರನ್ನು ಮೋಸದ ಬಲೆಗೆ ಬೀಳಿಸಿ ಹಣ ದೋಚುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಲೈಂಗಿಕತೆಯಲ್ಲಿ ಅತಿಯಾದ ಆಸಕ್ತಿ ಹೊಂದಿರುವ ಮಧ್ಯ ವಯಸ್ಕರನ್ನು ಟಾರ್ಗೆಟ್ ಮಾಡಿ ಈ ತಂಡವು ಕಾರ್ಯಾಚರಿಸುತ್ತಿತ್ತು. ಪುರುಷರನ್ನು ಮಹಿಳೆಯರು ಪುಸಲಾಯಿಸಿ, ಅವರ ನಗ್ನ ವಿಡಿಯೋ ಮಾಡಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ.

ಪುರುಷರನ್ನು ಬಲೆಗೆ ಬೀಳಿಸಿಕೊಂಡ ಬಳಿಕ ಅವರೊಂದಿಗೆ ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದು, ಸರಿಯಾದ ಸಮಯಕ್ಕಾಗಿ ಕಾಯುತ್ತಿರುವ ಇದೇ ತಂಡದ ಪುರುಷರು ಪೊಲೀಸ್ ವೇಷ ಧರಿಸಿ, ಕೋಣೆಗೆ ಎಂಟ್ರಿ ಕೊಡುತ್ತಿದ್ದರು. ಬಳಿಕ ಇದು ವೇಶ್ಯಾಗೃಹ ಎಫ್ ಐಆರ್ ಹಾಕ್ತೀವಿ ಎಂದು ಅವಾಜ್ ಹಾಕುತ್ತಾರೆ.

ಪೊಲೀಸರಿಂದ ಅರೆಸ್ಟ್ ಆದರೆ, ಹೊರ ಪ್ರಪಂಚದಲ್ಲಿ ಮಾನ ಮರ್ಯಾದೆ ಹೋಗುತ್ತದೆ ಎನ್ನುವುದು ತಿಳಿಯುತ್ತಿದ್ದಂತೆಯೇ ಸ್ಟಾಟ್ ಸೆಟಲ್ ಮೆಂಟ್ ಗೆ ಪುರುಷರು ಒಪ್ಪಿಕೊಂಡು ನಕಲಿ ಪೊಲೀಸರು ಹೇಳಿದ್ದಷ್ಟು ಹಣ, ಚಿನ್ನಾಭರಣಗಳನ್ನು ಕೈಗಿತ್ತು, ಹೊರಟು ಹೋಗುತ್ತಿದ್ದರು ಎನ್ನಲಾಗಿದೆ.

ಇಷ್ಟಕ್ಕೇ ಈ ಘಟನೆ ಮುಗಿಯಿತು ಎಂದು ಅವರು ಅಂದುಕೊಳ್ಳುತ್ತಿರುವಾಗಲೇ ಆರೋಪಿಗಳು, ಮತ್ತೆ ಕರೆ ಮಾಡಿ, ನಿನ್ನ ವಿಡಿಯೋ ನಮ್ಮಲ್ಲಿದೆ. ಹಣ ಕೊಡದಿದ್ದರೆ, ವಿಡಿಯೋವನ್ನು ನಿನ್ನ ಕುಟುಂಬಸ್ಥರಿಗೆ ಕಳುಹಿಸುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಹೇಳಲಾಗಿದೆ.

ಆರೋಪಿಗಳ ಈ ಕೃತ್ಯದಿಂದ ಬೇಸತ್ತ ಸಂತ್ರಸ್ತರು ಕೊನೆಗೆ ಪೊಲೀಸರ ಮೊರೆ ಹೋಗಿದ್ದು,  ಇದೀಗ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರು 13 ಜನರನ್ನು ಬಂಧಿಸಿ, ಬೆಲೆ ಬಾಳುವ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ 2 ಲಕ್ಷಕ್ಕೂ ಅಧಿಕ ನಗದು, 17 ಮೊಬೈಲ್, 24 ಸಿಮ್,  ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನಷ್ಟು ಸುದ್ದಿಗಳು…

ವಧುವರರಿಗೆ 5 ಲೀಟರ್ ಪೆಟ್ರೋಲ್ ಗಿಫ್ಟ್ ಕೊಟ್ಟು ಹಾಸ್ಯನಟ ನೀಡಿದ ಸಲಹೆ ಏನು ಗೊತ್ತಾ?

ಅಫ್ಘಾನಿಸ್ತಾನದಲ್ಲಿ ಸಿಲುಕಿದ ಕರ್ನಾಟಕ ಮೂಲದ ಇಬ್ಬರು ಕ್ರೈಸ್ತ ಧರ್ಮಗುರುಗಳು!

ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ ಬಿಜೆಪಿ ಕಾರ್ಯಕರ್ತರು!

ಅತ್ತೆ ಮನೆಯಲ್ಲಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪತಿ!

ಸಾರ್ವರ್ಕರ್ ಗಲಾಟೆ: ಎಸ್ ಡಿಪಿಐ ಮತ್ತು ಬಿಜೆಪಿಯ ಒಳ ಒಪ್ಪಂದದ ಕಾರ್ಯಕ್ರಮ | ಹಿಂದೂ ಮಹಾಸಭಾ ಆಕ್ರೋಶ

ಇತ್ತೀಚಿನ ಸುದ್ದಿ

Exit mobile version