ಅಫ್ಘಾನಿಸ್ತಾನದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ಹುಡುಕಾಡುತ್ತಿರುವ ತಾಲಿಬಾನಿಗಳು | ಡೆತ್ ಸ್ಕ್ವಾಡ್ ಆರಂಭ - Mahanayaka
9:39 AM Wednesday 5 - February 2025

ಅಫ್ಘಾನಿಸ್ತಾನದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ಹುಡುಕಾಡುತ್ತಿರುವ ತಾಲಿಬಾನಿಗಳು | ಡೆತ್ ಸ್ಕ್ವಾಡ್ ಆರಂಭ

taliban
04/09/2021

ಅಫ್ಘಾನಿಸ್ತಾನ: ಅಮೆರಿಕವು ತನ್ನ ಸೇನೆಯನ್ನು ಹಿಂಪಡೆದ ಬಳಿಕ ಅಫ್ಘಾನ್ ದೇಶವು ಸಂಪೂರ್ಣವಾಗಿ ತಾಲಿಬಾನಿಗಳ ಕೈ ಸೇರಿದೆ. ಈ ನಡುವೆ ಅಫ್ಘಾನ್ನರು ಇದೀಗ ಪ್ರಾಣ ಭಯದಿಂದ ನಡುಗುತ್ತಿದ್ದು, ತಾಲಿಬಾನಿಗಳು ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆಯುವವರ ವಿರುದ್ಧ ಡೆತ್ ಸ್ಕ್ವಾಡ್ ಆರಂಭಿಸಿದ್ದು, ಹೀಗಾಗಿ ಅಫ್ಘಾನ್ ನೆಲದಲ್ಲಿ ರಕ್ತ ಹರಿಯುವ ಮುನ್ಸೂಚನೆ ದೊರೆತಿದೆ.

ಇದೀಗ ಕೊಲ್ಲಲ್ಪಡುವವರ ಆಯ್ಕೆಯಲ್ಲಿ ಲೈಂಗಿಕ ಕಾರ್ಯಕರ್ತೆಯರು ಮೊದಲ ಸ್ಥಾನದಲ್ಲಿದ್ದು,  ಇದೀಗ ಅಫ್ಘಾನಿಸ್ತಾನದಲ್ಲಿ ಲೈಂಗಿಕ ಕಾರ್ಯಕರ್ತೆಯರಾಗಿ ದುಡಿಯುತ್ತಿದ್ದವರ ಪಟ್ಟಿ ತಾಲಿಬಾನಿಗರ ಕೈ ಸೇರಿದ್ದು, ಡೆತ್ ಸ್ಕ್ವಾಡ್ ಇದೀಗ ಅಫ್ಘಾನಿಸ್ತಾನದ ಮೂಲೆ ಮೂಲೆಯನ್ನೂ ಹುಡುಕಿ ಲೈಂಗಿಕ ಕಾರ್ಯಕರ್ತೆಯರನ್ನು ಭೀಕರವಾಗಿ ಹತ್ಯೆ ನಡೆಸಲಿದ್ದಾರೆ ಎನ್ನುವ ಆತಂಕಕಾರಿ ವಿಚಾರ ಇದೀಗ ತಿಳಿದು ಬಂದಿದೆ.

ಅಫ್ಘಾನಿಸ್ತಾನದಲ್ಲಿ 1996ರಿಂದ 2001ರವರೆಗೆ ಆಡಳಿತ ನಡೆಸಿದ್ದ ತಾಲಿಬಾನ್ ಹಿಂದೆಯೂ ಇದೇ ರೀತಿಯ ಕೆಲಸ ಮಾಡಿತ್ತು. ಲೈಂಗಿಕ ಕಾರ್ಯಕರ್ತೆಯರನ್ನು ಹುಡುಕಿ ಭೀಕರವಾಗಿ ಹತ್ಯೆ ಮಾಡಿದ್ದು, ಕೆಲವರನ್ನು ತಮ್ಮ ಲೈಂಗಿಕ ದಾಹವನ್ನು ತೀರಿಸಲು ಕೂಡ ಬಳಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಅಫ್ಘಾನಿಸ್ತಾನದಲ್ಲಿ ಇದೇ ರೀತಿಯ ಘಟನೆಗೆ ನಡೆಸಲು ತಾಲಿಬಾನಿಗಳು ಸಜ್ಜಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ನೆತ್ತರ ಕೋಡಿ ಹರಿಯುವ ಸುಳಿವು ಲಭ್ಯವಾಗಿದೆ.

ಇನ್ನಷ್ಟು ಸುದ್ದಿಗಳು…

ಸಾ.ರಾ.ಮಹೇಶ್ ಒಡೆತನದ ಜಾಗಗಳ ಮರು ಸರ್ವೇಗೆ ಆದೇಶ: ರೋಹಿಣಿ ಸಿಂಧೂರಿ ಆರೋಪಗಳಿಗೆ ಮರುಜೀವ

ಜನ್ಮ ನೀಡಿದ ತಂದೆಗೆ ನಡು ಬೀದಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಇಬ್ಬರು ಮಕ್ಕಳು!

ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಆತುರ ನನಗಿಲ್ಲ, 2023ರ ಚುನಾವಣೆಗಾಗಿ ಕಾಯುತ್ತಿದ್ದೇನೆ | ಬಿ.ವೈ.ವಿಜಯೇಂದ್ರ

ನವದೆಹಲಿಯ ಎಐಸಿಸಿ ಕಟ್ಟಡದಲ್ಲಿ ಐವನ್ ಡಿಸೋಜ ಕಚೇರಿ ಉದ್ಘಾಟನೆ | ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ

ರೈಲಿನೊಳಗೆ ಬರೇ ಒಳ ಉಡುಪಿನಲ್ಲಿ ಓಡಾಡಿದ ಶಾಸಕ | ವಿಡಿಯೋ ವೈರಲ್

ಟೋಯಿಂಗ್ ಮಾಡುವಾಗ ವಾಹನ ಮಾಲಿಕ ಸ್ಥಳದಲ್ಲೇ ಇದ್ದರೆ, ನೋ ಪಾರ್ಕಿಂಗ್ ಶುಲ್ಕ ಪಡೆದು ವಾಹನ ಬಿಟ್ಟುಕೊಡಬೇಕು | ಸಚಿವ ಆರಗ ಜ್ಞಾನೇಂದ್ರ ಸೂಚನೆ

ಇತ್ತೀಚಿನ ಸುದ್ದಿ