ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ತಂದೆಯನ್ನು ಹತ್ಯೆ ಮಾಡಿದ ಮಗಳು!
ಚೆನ್ನೈ: ಕೆಲವು ದಿನಗಳ ಹಿಂದೆ ತಮಿಳುನಾಡಿನ ವಿಲ್ಲುಪುರಂನಲ್ಲಿ ಮಗಳು ತನ್ನ ಕುಡುಕ ತಂದೆಯನ್ನು ಹತ್ಯೆ ಮಾಡಿದ ಪ್ರಕರಣ ನಡೆದಿದ್ದು, ಇದೀಗ ಬಾಲಕಿಯು ತನ್ನ ತಂದೆಯ ಲೈಂಗಿಕ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ತಂದೆಯನ್ನು ಹತ್ಯೆ ಮಾಡಿದ್ದಾಳೆ ಎನ್ನುವ ವಿಚಾರ ಬಯಲಿಗೆ ಬಂದಿದೆ.
ಬಾಲಕಿಯ ತಾಯಿ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಆಕೆಯ ಅಕ್ಕ 160 ಕಿ.ಮೀ. ದೂರದಲ್ಲಿರುವ ಚೆನ್ನೈನ ಜವಳಿ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಹತ್ಯೆ ನಡೆಸಿರುವ ಬಾಲಕಿಯು ತನ್ನ ತಂದೆಯ ಜೊತೆಗೆ ವಾಸಿಸುತ್ತಿದ್ದಳು.
ಬಾಲಕಿಯ ತಂದೆಯು ಮದ್ಯ ವ್ಯಸನಿಯಾಗಿದ್ದು, ಪುತ್ರಿಯನ್ನು ಹಿಂಸಿಸುತ್ತಿದ್ದ ಎಂದು ಹೇಳಲಾಗಿದೆ. ತಂದೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದಾಗ ತಿರುಗಿ ಬಿದ್ದ ಪುತ್ರಿ ತಂದೆಯನ್ನೇ ಹತ್ಯೆ ಮಾಡಿ ತನ್ನನ್ನು ರಕ್ಷಿಸಿಕೊಂಡಿದ್ದಾಳೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾನೂನು ತಜ್ಞರು, ಭಾರತೀಯ ದಂಡ ಸಂಹಿತೆ ಸೆಕ್ಷನ್ 100ರ ಅಡಿ ಖಾಸಗಿ ರಕ್ಷಣೆಯ ಹಕ್ಕನ್ನು ಜಾರಿಗೊಳಿಸಲಾಗಿದ್ದು, ಆಕೆಯನ್ನು ಈ ಪ್ರಕರಣದಿಂದ ಮುಕ್ತಗೊಳಿಸಲಾಗಿದೆ ಎಂದು ವಿಲ್ಲುಪುರಂ ಪೊಲೀಸ್ ಅಧಿಕಾರಿ ಎನ್. ಶ್ರೀನಾಥ್ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಎಗ್ ರೈಸ್, ಗೋಬಿ ಮಂಚೂರಿ ಆಸೆ ತೋರಿಸಿ ಬಾಲಕಿಯನ್ನು ಅತ್ಯಾಚಾರ ನಡೆಸಿದ್ದ ಕಾಮುಕ ಅರೆಸ್ಟ್!
ಪ್ರೀತಿಸಿ ವಿವಾಹವಾದ ಪತ್ನಿಗೆ ಅಕ್ರಮ ಸಂಬಂಧ | ಫೇಸ್ ಬುಕ್ ಲೈವ್ ಗೆ ಬಂದು ಪತ್ನಿ ಆತ್ಮಹತ್ಯೆ
ಗೋ ಕಳ್ಳತನಕ್ಕೆ ಜಾತಿ ಇಲ್ಲ, ಧರ್ಮ ಇಲ್ಲ, ಬಿಜೆಪಿಯವರೇ ಬೀಫ್ ಎಕ್ಸ್ ಪೋರ್ಟ್ ಮಾಡ್ತಿದ್ದಾರೆ | ಮಿಥುನ್ ರೈ
ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ: ತರಕಾರಿ ತರಲು ಹೋದ ಬಾಲಕಿಯ ಮೇಲೆ ಅತ್ಯಾಚಾರ
ಅಸ್ಪೃಶ್ಯತೆ ಜೀವಂತವಿದೆ ಎನ್ನುವುದನ್ನು ಒಪ್ಪಿಕೊಂಡು ಬದಲಾವಣೆಗೆ ಶ್ರಮಿಸಬೇಕು | ಡಿವೈಎಸ್ ಪಿ ರಮೇಶ್
ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು ಎಂದ ಉತ್ತರ ಪ್ರದೇಶ ಸಚಿವ!