ಲೈಂಗಿಕ ಕ್ರಿಯೆಗೆ ಒಪ್ಪದ ಮಹಿಳೆಯ ಮೇಲೆ ಹೇಯ ಕೃತ್ಯ! - Mahanayaka
8:08 PM Wednesday 11 - December 2024

ಲೈಂಗಿಕ ಕ್ರಿಯೆಗೆ ಒಪ್ಪದ ಮಹಿಳೆಯ ಮೇಲೆ ಹೇಯ ಕೃತ್ಯ!

03/02/2021

ಲಕ್ನೋ: ಒಂಟಿಯಾಗಿದ್ದ ಮಹಿಳೆಯ ಮನೆಗೆ ನುಗ್ಗಿದ ದುಷ್ಟನೋರ್ವ ಮಹಿಳೆಯ ಮೇಲೆ ಆ್ಯಸಿಡ್ ಎರಚಿ, ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಉತ್ತರಪ್ರದೇಶದ ಸಕ್ರಿ ಗ್ರಾಮದಲ್ಲಿ ನಡೆದಿದೆ.

ಸಂತೇಂದರ್ ಬಂಧಿತ ಆರೋಪಿಯಾಗಿದ್ದಾನೆ. ಪಕ್ಕದ ಮನೆಯ ಮಹಿಳೆಯ ಪತಿ ಊರಿನಲ್ಲಿ ಇಲ್ಲ ಎನ್ನುವುದು ತಿಳಿಯುತ್ತಿದ್ದಂತೆಯೇ ಆತ ಮನೆಗೆ ನುಗ್ಗಿದ್ದು,  ಮೂರು ಮಕ್ಕಳ ತಾಯಿಯಾಗಿರುವ ಮಹಿಳೆಯನ್ನು ಲೈಂಗಿಕ ಕ್ರಿಯೆಗೆ ಬರುವಂತೆ ಕರೆದಿದ್ದಾನೆ. ಇದನ್ನು ಮಹಿಳೆ ವಿರೋಧಿಸಿದ್ದು, ಈ ವೇಳೆ ಮಹಿಳೆಯ ಮೇಲೆ ಆ್ಯಸಿಡ್ ಎರಚಿದ್ದು, ಆ್ಯಸಿಡ್ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಮಹಿಳೆ ನೆಲಕ್ಕೆ ಬಿದ್ದು, ನೋವಿನಿಂದ ಚೀರಾಡಿದ್ದು, ಈ ವೇಳೆ ಚಾಕುವಿನಿಂದ ಮಹಿಳೆಗೆ ಇರಿದಿದ್ದಾನೆ.

ಮಹಿಳೆಯ ಚೀರಾಟ ಕೇಳೀ ಸ್ಥಳೀಯರು ಧಾವಿಸಿದ್ದು,  ಈ ವೇಳೆ ಮಹಿಳೆಯು ಸಾವು ನೋವಿನ ನಡುವೆ ಹೋರಾಡುತ್ತಿದ್ದಳು. ಅವರು ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಹಿಳೆಯ ಪತಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯು ಮೂವರು ಮಕ್ಕಳೊಂದಿಗೆ  ಒಂಟಿಯಾಗಿ ವಾಸವಾಗಿದ್ದರು. ಇದನ್ನು ಗಮನಿಸಿಯೇ ಆರೋಪಿ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ