ಕನ್ನಡ ಕೋಟ್ಯಾಧಿಪತಿಯಲ್ಲಿ ಸ್ಪರ್ಧಿಸಿದ್ದ ಲೈನ್ ಮೆನ್ ಆತ್ಮಹತ್ಯೆಗೆ ಶರಣು - Mahanayaka
4:10 AM Wednesday 11 - December 2024

ಕನ್ನಡ ಕೋಟ್ಯಾಧಿಪತಿಯಲ್ಲಿ ಸ್ಪರ್ಧಿಸಿದ್ದ ಲೈನ್ ಮೆನ್ ಆತ್ಮಹತ್ಯೆಗೆ ಶರಣು

timmanna bheemappa
05/05/2022

ಬಾಗಲಕೋಟೆ: ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ 6.40 ಲಕ್ಷ ರೂಪಾಯಿ ಗೆದ್ದಿದ್ದ ಲೈನ್ ಮೆನ್ ತಿಮ್ಮಣ್ಣ ಭೀಮಪ್ಪ ಗುರಡಿ  ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯೂ ಮೂಡಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಮಲಝರಿ ಗ್ರಾಮದ  ಹೊರವಲಯದಲ್ಲಿರುವ ಮುಧೋಳ ತಾಲೂಕಿನ ಮಂಟೂರು ಗ್ರಾಮ ವ್ಯಾಪ್ತಿಯ ತೋಟದ ಮನೆಯಲ್ಲಿ  ತಿಮ್ಮಣ್ಣ ಭೀಮಪ್ಪ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.

ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದುಮ ತಡವಾಗಿ ಬೆಳಕಿಗೆ ಬಂದಿದೆ. ಹೊಸ ಮನೆಯನ್ನು ಕಟ್ಟಿಸಿದ್ದ ತಿಮ್ಮಣ್ಣ ಭೀಮಪ್ಪ  ಗೃಹ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಅಂದು ರಾತ್ರಿ ಪಾನ್ ಶಾಪ್ ಗೆ ಬಂದಿದ್ದ ತಿಮ್ಮಣ್ಣ ಭೀಮಪ್ಪ ಗೃಹ ಪ್ರವೇಶದ ಬಗ್ಗೆ ಚರ್ಚೆ ನಡೆಸಿ ಬಳಿಕ ತೆರಳಿದ್ದು, ಆ ಬಳಿಕ ಆತ್ಮಹತ್ಯೆಗೆ ಶರಣಾಗಿರುವುದಾಗಿ ಹೇಳಲಾಗಿದೆ.

ಸರ್ಕಾರಿ ನೌಕರಿಯಲ್ಲಿದ್ದ ತಿಮ್ಮಣ್ಣ ಭೀಮಪ್ಪಗೆ ಉತ್ತಮ ವೇತನವಿತ್ತು. ಆದರೆ,  ಸಾಲಕ್ಕಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಆತ್ಮಹತ್ಯೆಯ ನಿರ್ಧಾರಗಳಿಂದ ದೂರವಿರಿ. ಮನಸ್ಸು ನಿಯಂತ್ರಿಸಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ನೀವಿದ್ದರೆ, 9152987821 ಸಂಖ್ಯೆಗೆ ಕರೆ ಮಾಡಿ ತಜ್ಞರ ಸಲಹೆ ಪಡೆಯಿರಿ

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಸೀದಿಗಳ ಎದುರು ಸೌಂಡ್​ ಬಾಕ್ಸ್ ಹಾಕಿ ಹನುಮಾನ್​ ಚಾಲೀಸ್ ಹಾಕ್ತೇವೆ: ಬಿಜೆಪಿ ಸರ್ಕಾರಕ್ಕೆ ಸಿದ್ಧಲಿಂಗ ಸ್ವಾಮೀಜಿ ಸವಾಲು

ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್: ರಾಮ್ ಗೋಪಾಲ್ ವರ್ಮಾ

ಮತ್ತೊಮ್ಮೆ ಪ್ರಶಸ್ತಿ ಪಡೆದ “ಜೈ ಭೀಮ್” ಚಿತ್ರ: ಒಂದೇ ಸಮಾರಂಭದಲ್ಲಿ 2 ಪ್ರಶಸ್ತಿ!

ಇಂದಿಗೆ ಹೆಚ್ಚು ಪ್ರಸ್ತುತವಾಗಿರುವ ಮಹಾರ್ ಸಮುದಾಯವನ್ನುದ್ದೇಶಿಸಿ ಅಂಬೇಡ್ಕರರು ಹೇಳಿದ ಆ ಮಾತುಗಳು!

ಟಿಪ್ಪರ್ ಲಾರಿ, ಬೈಕ್ ನಡುವೆ ಅಪಘಾತ: ಓರ್ವ ಯುವಕ ಸಾವು,  ಮತ್ತೋರ್ವ ಗಂಭೀರ

ಇತ್ತೀಚಿನ ಸುದ್ದಿ