ಲಖಿಂಪುರ ಖೇರಿ ಹಿಂಸಾಚಾರ ಬಿಜೆಪಿಗೆ ಹಾನಿಯುಂಟು ಮಾಡಬಹುದು | ಸಮೀಕ್ಷೆ - Mahanayaka
9:09 AM Thursday 12 - December 2024

ಲಖಿಂಪುರ ಖೇರಿ ಹಿಂಸಾಚಾರ ಬಿಜೆಪಿಗೆ ಹಾನಿಯುಂಟು ಮಾಡಬಹುದು | ಸಮೀಕ್ಷೆ

lakhimpur kheri
13/11/2021

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣವು ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಾನಿಯುಂಟು ಮಾಡಬಹುದು ಎಂದು ‘ಎಬಿಪಿ-ಸಿವೋಟರ್ ಸಮೀಕ್ಷೆ ಹೇಳಿದೆ.

ಅಕ್ಟೋಬರ್ 30ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಸಚಿವರ ಪುತ್ರ ರೈತರ ಮೇಲೆ ಕಾರು ಹರಿಸಿ ಬರ್ಬರವಾಗಿ ಹತ್ಯೆ ನಡೆಸಿದ ಘಟನೆಯ ಬಳಿಕ ಹಿಂಸಾಚಾರದಲ್ಲಿ ಹಲವರು ಸಾವಿಗೀಡಾಗಿದ್ದರು. ಈ ಘಟನೆ ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಸೃಷ್ಟಿಯಾಗಲು ಕಾರಣವಾಗಿದೆ ಎಂದು ಸಮೀಕ್ಷೆ ಹೇಳಿದೆ.

ಲಖಿಂಪುರ ಖೇರಿ ವಿಚಾರವು ಬಿಜೆಪಿಗೆ ಹಾನಿಯುಂಟು ಮಾಡುತ್ತದೆ ಎಂದು ಶೇ.62ರಷ್ಟು ಮತದಾರರು ಅಭಿಪ್ರಾಯಪಟ್ಟಿದ್ದಾರೆ. ಶೇ.21.5 ಜನರು ಇದು ಬಿಜೆಪಿಗೆ ನೆರವಾಗುತ್ತದೆ ಎಂದು ಭಾವಿಸಿದ್ದಾರೆ. ಶೇ.16ರಷ್ಟು ಜನರು ಚುನಾವಣೆಯ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾವಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಉತ್ತರ ಪ್ರದೇಶದಲ್ಲಿ ಉದ್ಘಾಟನೆಗೊಂಡ 9 ವೈದ್ಯಕೀಯ ಕಾಲೇಜುಗಳು ಯೋಗಿ ಸರ್ಕಾರಕ್ಕೆ ಲಾಭ ತರಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಶೇ.58.8 ಮತದಾರರು ಇದನ್ನು ಒಪ್ಪಿಕೊಂಡಿದ್ದಾರೆ. ಆದರೆ. ಶೇ.48.2 ಜನರು ಇದರಿಂದ ಸರ್ಕಾರಕ್ಕೆ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದ್ದಾರೆ.

ಇನ್ನೂ ಯೋಗಿ ಸರ್ಕಾರದ ಲಸಿಕೆ ಅಭಿಯಾನವನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ ಶೇ.56 ಜನರು ಇದನ್ನು ವಿಶೇಷ ಎಂದೇ ಪರಿಗಣಿಸಿಲ್ಲ. 44.3ರಷ್ಟು ಜನರು ಇದು ಮತದಾರರು ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸಿದ್ದಾರೆ.

ರಾಜ್ಯದ 403 ವಿಧಾನಸಭಾ ಕ್ಷೇತ್ರಗಳ 3,571 ಜನರನ್ನು ಸಮೀಕ್ಷೆಗಾಗಿ ಸಂಪರ್ಕಿಸಲಾಗಿತ್ತು ಎಂದು ಸಮೀಕ್ಷಾ ಸಂಸ್ಥೆಗಳು ಹೇಳಿವೆ. ಸಮೀಕ್ಷೆಗಳು ಅಂತಿಮ ಫಲಿತಾಂಶವಲ್ಲ, ಆದರೆ, ರಾಜಕೀಯ ಪಕ್ಷಗಳನ್ನು ಸಮೀಕ್ಷೆಗಳು ಚುನಾವಣೆಗೂ ಮೊದಲು ಎಚ್ಚರಿಸುತ್ತವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಕಂಗನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದು ಯಾವಾಗ? | ಹುತಾತ್ಮ ವೀರರ ತ್ಯಾಗಕ್ಕೆ ಘೋರ ಅವಮಾನ

ದೇಶ ವಿಭಜನೆಯಾಗಲು ಅಂದಿನ ಕಾಂಗ್ರೆಸ್ ನಾಯಕರೇ ಕಾರಣ | ಅಸಾದುದ್ದಿನ್ ಓವೈಸಿ ಗುಡುಗು

KSRTC ಬಸ್ ನಲ್ಲಿ ಜೋರಾಗಿ ಹಾಡು ಹಾಕಿದರೆ ಶಿಸ್ತು ಕ್ರಮ: ಶಿಕ್ಷೆ ಏನು ಗೊತ್ತಾ?

ಯುವಕನನ್ನು ಹೆಗಲ ಮೇಲೆ ಹೊತ್ತು ರಕ್ಷಿಸಿದ ಮಹಿಳಾ ಇನ್ಸ್ ಪೆಕ್ಟರ್  ರಾಜೇಶ್ವರಿಗೆ ಸಿಎಂ ಸ್ಟಾಲಿನ್ ಅಭಿನಂದನೆ

ತಾಯಿ ಮೃತಪಟ್ಟರೂ ಗರ್ಭದಲ್ಲಿದ್ದ ಮಗುವನ್ನು ರಕ್ಷಿಸಿದ ವೈದ್ಯರು! | ಅಪರೂಪದ ಘಟನೆ

ತಲೆಗೆ ಗುಂಡು ಹಾರಿಸಿಕೊಂಡು ಕಾಂಗ್ರೆಸ್ ಶಾಸಕನ ಪುತ್ರ ಆತ್ಮಹತ್ಯೆ!

“47ರ ಸ್ವಾತಂತ್ರ್ಯ ಭಿಕ್ಷೆ, ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ” | ನಟಿ ಕಂಗನಾ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ

ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತಿದ್ದೀರಿ | ಹೈಕೋರ್ಟ್ ಪ್ರಶ್ನೆ

ಇತ್ತೀಚಿನ ಸುದ್ದಿ