“ಏಯ್ ಬಾರೋ ಆಚೆಗೆ”: ಸಿ.ಟಿ.ರವಿಗೆ ಹಲ್ಲೆಗೆ ಯತ್ನಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು!
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅಸಂವಿಧಾನಿಕ ಪದ ಬಳಕೆ ಆರೋಪಿಸಿ, ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಸುವರ್ಣ ಸೌಧದಲ್ಲಿ ನಡೆಯಿತು.
ಸಿ.ಟಿ.ರವಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿರುವ ವಿಚಾರ ತಿಳಿದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ ಬೆಂಬಲಿಗರು, ಸಿ.ಟಿ.ರವಿಗೆ ಧಿಕ್ಕಾರ ಕೂಗಿದರಲ್ಲದೇ, ಏಯ್ ಆಚೆ ಬಾರೋ ಧೈರ್ಯವಿದ್ದರೆ ಎಂದು ಆವಾಜ್ ಹಾಕಿದರು. ಈ ವೇಳೆ ಸಿ.ಟಿ.ರವಿ, ಬಾ ಹೊಡಿ ಬಾ ಅದೇನ್ ಮಾಡ್ತಾರೆ ಮಾಡ್ಲಿ ಬಿಡಿ ಎಂದು ಪ್ರತಿಸವಾಲು ಹಾಕಿದ ಘಟನೆ ನಡೆಯಿತು.
ಹಲ್ಲೆಗೆ ಯತ್ನದ ಬಳಿಕ ಸಿ.ಟಿ.ರವಿ ಹಾಗೂ ಅಶ್ವಥ್ ನಾರಾಯಣ್ ಸ್ಥಳದಲ್ಲೇ ಧರಣಿ ಕುಳಿತು ಘಟನೆಯನ್ನು ಖಂಡಿಸಿದರು. ಬಳಿಕ ಎಡಿಜಿಪಿ ಮನವೊಲಿಸಿದ ನಂತರ ಸಭಾಪತಿಗಳಿಗೆ ದೂರು ನೀಡಲು ತೆರಳಿದರು. ಇದೇ ವೇಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7