ಲಾಲ್ ಬಹದ್ದೂರು ಶಾಸ್ತ್ರಿಯವರಂತೆಯೇ, ಪ್ರಧಾನಿ ಮೋದಿ ಫೋಟೋ | ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೋ ಚರ್ಚೆ?

ನವದೆಹಲಿ: ಪ್ರಧಾನಿ ಮೋದಿ ಸೆಪ್ಟಂಬರ್ 22ರಂದು ಅಮೆರಿಕಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಕಾಗದ ಪತ್ರಗಳ ಪರಿಶೀಲನೆ ನಡೆಸುತ್ತಿರುವ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಆದರೆ, ಇದೀಗ ಈ ಚಿತ್ರ ಮಾಜಿ ಪ್ರಧಾನಿ ಲಾಲ್ ಬಹದ್ದೂರು ಶಾಸ್ತ್ರಿ ಅವರ ಚಿತ್ರದ ನಕಲು ಎಂದು ನೆಟ್ಟಿಗರು ತೀವ್ರ ಟ್ರೋಲ್ ಮಾಡಿದ್ದಾರೆ.
ಇಂಡಿಯಾ ಹಿಸ್ಟರಿ ಪಿಕ್ಸ್ ಎಂಬ ಟ್ವಿಟ್ಟರ್ ಖಾತೆಯಲ್ಲಿ , ವಿಮಾನದಲ್ಲಿ ಲಾಲ್ ಬಹದ್ದೂರು ಶಾಸ್ತ್ರಿ ಅವರು ಕಡತಗಳನ್ನು ಪರಿಶೀಲಿಸುತ್ತಾ ತಮ್ಮ ಪತ್ನಿ ಜೊತೆ ಪ್ರಯಾಣಿಸುತ್ತಿರುವ ಫೋಟೋವನ್ನು ಮೂರು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿತ್ತು. ಈ ಚಿತ್ರಕ್ಕೆ ಸಂಜೀವ್ ಪಿ. ಸಾಯಿಕಿಯಾ ಎಂಬ ಟ್ಟಿಟ್ಟರ್ ಬಳಕೆದಾರರೊಬ್ಬರು ಕಮೆಂಟ್ ಮಾಡಿ, ಶೀಘ್ರವೇ ಈ ತರಹದ ಫೋಟೋ ಹೊಸ ರೂಪದಲ್ಲಿ ಬರಲಿದೆ ಮಿತ್ರರೇ. ಐಡಿಯಾ ಕೊಟ್ಟಿದ್ದಕ್ಕೆ ಧನ್ಯವಾದ ಎಂದು ರೀಟ್ವಿಟ್ ಮಾಡಿದ್ದರು.
ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಅದೇ ಹೋಲಿಕೆಯೊಂದಿಗೆ ತೆಗೆಸಿಕೊಳ್ಳಲಾಗಿದ್ದು, ಇದೀಗ ಈ ಎರಡು ಫೋಟೋಗಳಿಗೆ ಸಾಮ್ಯತೆ ಇದ್ದು, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಫೋಟೋವನ್ನು ಆಧಾರಿಸಿ ಮೋದಿ ಅವರು ಕೂಡ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ನೆಟ್ಟಿಗರು ವಾದಿಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on
ಇನ್ನಷ್ಟು ಸುದ್ದಿಗಳು…
ಪತ್ನಿಯ ಕುತ್ತಿಗೆಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ರಿಯಲ್ ಎಸ್ಟೇಟ್ ಉದ್ಯಮಿ!
ಶಾಕಿಂಗ್ ನ್ಯೂಸ್: ತಾನು ತೊಟ್ಟಿದ್ದ ಮಾಸ್ಕ್ ಬಿಚ್ಚಿ ಮಾಜಿ ಸಂಸದಗೆ ತೊಡಿಸಿದ ಕೇಂದ್ರ ಸಚಿವ!
ಹಾಲು ಬೇಕೆಂದು ಹಠ ಮಾಡುತ್ತಿದ್ದ ಮಗುವನ್ನು ನೆಲಕ್ಕೆ ಬಡಿದು ಹತ್ಯೆ ಮಾಡಿದ ತಾಯಿ!
ಬಾಲಕಿಯ ಮೇಲೆ 29 ಮಂದಿಯಿಂದ ಅತ್ಯಾಚಾರ: 21 ಆರೋಪಿಗಳ ಅರೆಸ್ಟ್
ಗೋಬಿ ಮಂಚೂರಿ, ಎಗ್ ರೈಸ್ ಕೊಡಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ!
ಅಂಗಡಿಗೆ ನುಗ್ಗಿ 2 ಗೋಣಿ ಸಿಗರೇಟ್. ಗುಟ್ಕಾ ಕಳವು ಮಾಡಿದ ಕಳ್ಳರು!
ಮೊಬೈಲ್ ಚಾರ್ಜ್ ಇಡುವ ವೇಳೆ ವಿದ್ಯುತ್ ಶಾಕ್ ತಗಲಿ ಒಂದೇ ಕುಟುಂಬದ ಮೂವರ ದಾರುಣ ಸಾವು