ಬಾಯ್ಕಾಟ್ ಬೆದರಿಕೆ ನಡುವೆಯೇ ದಾಖಲೆ ಬರೆದ ಆಮೀರ್ ಖಾನ್ ಚಿತ್ರ ‘ಲಾಲ್ ಸಿಂಗ್ ಚಡ್ಡ’
ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡ ಸಿನಿಮಾ ಬಿಡುಗಡೆಗೂ ಮೊದಲೇ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ ದಾಖಲೆ ಬರೆದಿದ್ದು, ಬಾಕ್ಸ್ ಆಫೀಸ್ ನಲ್ಲಿ ಅತ್ಯುತ್ತಮ ದಾಖಲೆ ಬರೆಯಲು ಹೊರಟಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಆಮೀರ್ ಖಾನ್ ಅವರ ಚಿತ್ರ ಬಾಯ್ಕಾಟ್ ಗೆ ಕರೆ ನೀಡಲಾಗಿತ್ತು. ಆದರೆ, ಇದ್ಯಾವುದು ಕೂಡ ಲಾಲ್ ಸಿಂಗ್ ಚಡ್ಡಗೆ ಅಡ್ಡ ನಿಲ್ಲಲು ಸಾಧ್ಯವಾಗಿಲ್ಲ. ಲಾಲ್ ಸಿಂಗ್ ಚಡ್ಡ ಚಿತ್ರ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿಯೇ ದಾಖಲೆ ಬರೆದಿದೆ.
ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಆಮೀರ್ ಖಾನ್ ಅವರ, ಒಂದು ಹೇಳಿಕೆಯನ್ನು ಮುಂದಿಟ್ಟುಕೊಂಡು ಲಾಲ್ ಸಿಂಗ್ ಚಡ್ಡ ಸಿನಿಮಾ ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿತ್ತು. ಯಾವೆಲ್ಲ ಚಿತ್ರಗಳನ್ನು ಬಾಯ್ಕಾಟ್ ಮಾಡುವಂತೆ ಕರೆ ನೀಡುತ್ತಾರೋ ಆ ಚಿತ್ರಗಳೆಲ್ಲ, ಗೆಲುವು ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದೆ.
ಇತ್ತೀಚೆಗೆ ಸಾಯಿಪಲ್ಲವಿ ನಟನೆಯ ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿತ್ತು. ಆದರೆ ಆ ಚಿತ್ರ ಅದ್ದೂರಿ ಗೆಲುವು ದಾಖಲಿಸಿತ್ತು. ಇದೀಗ ಆಮೀರ್ ಖಾನ್ ನಟನೆಯ ಚಿತ್ರ ಕೂಡ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ.
ಇದೇ ಆಗಸ್ಟ್ 11 ರಂದು ಸಿನಿಮಾದ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಅಡ್ವಾನ್ಸ್ ಬುಕಿಂಗ್ಸ್ ಓಪನ್ ಆದ ಕೇವಲ 24 ಗಂಟೆಯ ಒಳಗೆ 1.12 ಕೋಟಿ ರುಪಾಯಿಗಳನ್ನು ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka