ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಲೈನ್ ಮ್ಯಾನ್!
ದಾವಣಗೆರೆ: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೈನ್ ಮ್ಯಾನ್ ವೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ಸದ್ಯ ಲೈನ್ ಮ್ಯಾನ್ ನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ದಾವಣಗೆರೆಯ ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಕಚೇರಿಯ ಎಂಟಿ ಉಪವಿಭಾಗದ ಲೈನ್ ಮ್ಯಾನ್ ರವಿಕುಮಾರ್ ಎಸಿಬಿ ಬಲೆಗೆ ಬಿದ್ದವರು ಎಂದು ವರದಿಯಾಗಿದೆ. ಹಿಟ್ಟಿನ ಗಿರಣಿ ಮಾಲಿಕನಿಂದ 5 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ.
ದಾವಣಗೆರೆಯ ಶ್ರಿರಾಮ್ ಎಂಬುವರು ಹಿಟ್ಟಿನ ಗಿರಣಿಯ ಬಾಕಿ ಬಿಲ್ ಗೆ 15 ಸಾವಿರ ದಂಡ ಪಾವತಿಸಬೇಕಿತ್ತು. ಶ್ರೀರಾಮ್ ಎನ್ನುವರಿಗೆ ದಂಡವನ್ನು ಸರಿಪಡಿಸಲು ರವಿಕುಮಾರ್ ಐದು ಸಾವಿರ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಹಿಟ್ಟಿನ ಗಿರಣಿ ಮಾಲೀಕ ಶ್ರೀರಾಮ್ ಎಸಿಬಿ ಗೆ ದೂರು ಸಲ್ಲಿಸಿದ್ದರು. ಬುಧವಾರ ಬೆಳಗ್ಗೆ ಕಚೇರಿ ಆವರಣದಲ್ಲಿರುವ ಗಣೇಶ ದೇವಸ್ಥಾನದ ಬಳಿ 5 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
“ಡಿಸೆಂಬರ್ 31ರಂದು ಕರ್ನಾಟಕ ಬಂದ್ ಫಿಕ್ಸ್, ಬದಲಾವಣೆಯ ಮಾತೇ ಇಲ್ಲ”
ಕೊರಗ ಜನಾಂಗದ ಮೇಲೆ ಲಾಠಿ ಚಾರ್ಜ್ ನಡೆಸಿ ದೌರ್ಜನ್ಯ: ಕೋಟ ಠಾಣೆ ಪಿಎಸ್ ಐ ಸಂತೋಷ್ ಬಿ.ಪಿ. ಸಸ್ಪೆಂಡ್
ಹೊತ್ತಿ ಉರಿದ ಮನೆ: ಒಂದೇ ಕುಟುಂಬದ ಐವರು ಮಕ್ಕಳ ದಾರುಣ ಸಾವು
ಪಟಾಕಿಯ ಕಿಡಿ ಸೋಕಿ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ದೇವರ ರಥ!
ಬಿಜೆಪಿಗೆ ವೋಟು ಹಾಕಿದರೆ 50 ರೂಪಾಯಿಗೆ ಮದ್ಯ ಕೊಡುತ್ತೇವೆ | ಬಿಜೆಪಿ ನಾಯಕ ಹೇಳಿಕೆ
ಸಾರ್ವಜನಿಕರೆದುರೇ ಮಹಿಳೆಯನ್ನು ಕೊಚ್ಚಿ ಕೊಂದ ಮೂರನೇ ಪತಿ ಸಹಿತ ಇಬ್ಬರು ಅರೆಸ್ಟ್!