ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: ಮೇಘಸ್ಫೋಟಕ್ಕೆ 13 ಮಂದಿ ಬಲಿ
ಹಿಮಾಚಲ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 13 ಕ್ಕೆ ಏರಿದೆ. ಭಾನುವಾರ ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳಿಂದ ನಾಲ್ಕು ಶವಗಳು ಪತ್ತೆಯಾಗಿವೆ.
ಅಧಿಕೃತ ಮಾಹಿತಿಯ ಪ್ರಕಾರ, ಜುಲೈ 31 ರ ರಾತ್ರಿ ಕುಲುವಿನ ನಿರ್ಮಂದ್, ಸೈಂಜ್ ಮತ್ತು ಮಲಾನಾ, ಮಂಡಿಯ ಪಧರ್ ಮತ್ತು ಶಿಮ್ಲಾದ ರಾಂಪುರ್ ಉಪವಿಭಾಗದಲ್ಲಿ ಸರಣಿ ಮೋಡ ಸ್ಫೋಟ ಸಂಭವಿಸಿದ ನಂತರ 40 ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ರಕ್ಷಣಾ ಸಿಬ್ಬಂದಿ ಹೆಚ್ಚಿನ ಯಂತ್ರೋಪಕರಣಗಳು, ಸ್ನಿಫರ್ ಡಾಗ್ ಸ್ಕ್ವಾಡ್ ಗಳು, ಡ್ರೋನ್ ಗಳು ಮತ್ತು ಇತರ ಉಪಕರಣಗಳನ್ನು ನಿಯೋಜಿಸುವ ಮೂಲಕ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಜೂನ್ 27 ರಂದು ಮುಂಗಾರು ಆರಂಭವಾದಾಗಿನಿಂದ ಆಗಸ್ಟ್ 4 ರವರೆಗೆ ಹಿಮಾಚಲ ಪ್ರದೇಶವು 662 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ. ಈ ದುರಂತವು ವಿನಾಶದ ಹಾದಿಯನ್ನು ಬಿಟ್ಟುಹೋಗಿದೆ, ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ರಾಜ್ಯದಾದ್ಯಂತ ಮೂಲಸೌಕರ್ಯಗಳನ್ನು ನಾಶಪಡಿಸಿದೆ. ಜೂನ್ 27 ರಿಂದ ಉಂಟಾದ ನಷ್ಟವು ಮೂಲಸೌಕರ್ಯ ಮತ್ತು ಇತರ ಆಸ್ತಿಗಳಿಗೆ ಗಣನೀಯ ಹಾನಿಯನ್ನುಂಟು ಮಾಡಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಬಹಿರಂಗಪಡಿಸಿದ್ದಾರೆ.
ಶೋಧ ಕಾರ್ಯಾಚರಣೆ ನಡೆಯುತ್ತಿರುವಾಗ, ಶಿಮ್ಲಾ ಮತ್ತು ಕುಲ್ಲು ಗಡಿಯಲ್ಲಿರುವ ಸಮೀಜ್, ಧಾರಾ ಸರ್ದಾ ಮತ್ತು ಕುಶ್ವ ಎಂಬ ಮೂರು ಗ್ರಾಮಗಳಲ್ಲಿ ವಿದ್ಯುತ್ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಯಾಕೆಂದರೆ ಬುಧವಾರ ರಾತ್ರಿ ಪ್ರವಾಹ ಸಂಭವಿಸಿದ್ದು, ರಸ್ತೆಗಳು ಸಹ ಹಾನಿಗೊಳಗಾಗಿವೆ.
ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್), ಅಸ್ಸಾಂ (ಎಸ್ಡಿಆರ್ಎಫ್), ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಹಿಮಾಚಲ ಪ್ರದೇಶ ಪೊಲೀಸರು ಮತ್ತು ಗೃಹರಕ್ಷಕ ದಳದ 410 ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth