‘ಕೋವಿಶೀಲ್ಡ್’ ಲಸಿಕೆ ಗಂಭೀರ ಅಡ್ಡಪರಿಣಾಮ ಬೀರಿದರೆ ನಷ್ಟಪರಿಹಾರ ನೀಡುತ್ತೇವೆ ಎಂದ ಸಂಸ್ಥೆ
16/01/2021
ನವದೆಹಲಿ: ದೇಶೀಯ ಔಷಧಿ ತಯಾರಿಕಾ ದಿಗ್ಗಜ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ‘ಕೋವಾಕ್ಸಿನ್’ ಹಾಗೂ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ‘ಕೋವಿಶೀಲ್ಡ್’ ಲಸಿಕೆಗಳ ವಿತರಣೆ ಪ್ರಾರಂಭಗೊಂಡಿದೆ. ಇದೇ ಸಂದರ್ಭದಲ್ಲಿ ಕೊರೊನಾ ಲಸಿಗೆ ಅಡ್ಡ ಪರಿಣಾಮ ಬೀರಿರುವುದು ಸಾಬೀತಾದರೆ ನಷ್ಟಪರಿಹಾರ ನೀಡುವುದಾಗಿ ಸಂಸ್ಥೆ ತಿಳಿಸಿದೆ.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ‘ಕೋವಾಕ್ಸಿನ್’ ಅನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ. ಕೋವಿಡ್ ವಿರುದ್ದ ಹೋರಾಡಲು ಈ ಲಸಿಕೆ ವ್ಯಕ್ತಿಗಳ ದೇಹದಲ್ಲಿ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂಬುದನ್ನು ಮೊದಲ ಎರಡು ಪ್ರಯೋಗಗಳಲ್ಲಿ ಸಾಬೀತುಪಡಿಸಲಾಗಿದೆ. ಆದರೆ, ಪ್ರಸ್ತುತ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ.
‘ಕೋವಾಕ್ಸಿನ್’ ಲಸಿಕೆ ಪಡೆದುಕೊಂಡವರಲ್ಲಿ ಗಂಭೀರ ಅಡ್ಡಪರಿಣಾಮಗಳು ಕಂಡುಬಂದರೆ ನಾವು ಪರಿಹಾರ ನೀಡುವ ಜತೆಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಕಲ್ಪಿಸುತ್ತೇವೆ ಎಂದು ಸಂಸ್ಥೆ ತಿಳಿಸಿದೆ.