ಲಸಿಕೆ ಹಾಕಿಸ್ಕೊಳ್ಳಿ ಅಂದ್ರೆ ಆತ್ಮಹತ್ಯೆ ಮಾಡ್ಕೊಳ್ತೀವಿ ಅಂತಾರೆ ಸರ್ | ಆಶಾ ಕಾರ್ಯಕರ್ತೆ ಬಿಚ್ಚಿಟ್ಟ ಸತ್ಯ
08/06/2021
ಚಾಮರಾಜನಗರ: “ಕೊವಿಡ್ ಲಸಿಕೆ ಹಾಕಿಸಿಕೊಳ್ಳಿ ಅಂತ ಹೇಳಿದ್ರೆ… ಜನ ನಾವು ಆತ್ಮಹತ್ಯೆ ಮಾಡಿಕೊಳ್ತೀವಿ ಅಂತ ಹೇಳ್ತಿದ್ದಾರೆ ಸರ್…” ಎಂದು ಆಶಾ ಕಾರ್ಯಕರ್ತೆಯೊಬ್ಬರು ತಮಗಾದ ಅನುಭವವನ್ನು ಟಾಸ್ಕ್ ಫೋರ್ಸ್ ಸಭೆಯಲ್ಲಿ ಬಿಚ್ಚಿಟ್ಟಿದ್ದಾರೆ.
ಇಂದು ಸಚಿವ ಸುರೇಶ್ ಕುಮಾರ್ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ಸಭೆ ನಡೆಸಿದ್ದು, ಈ ವೇಳೆ ಆಶಾ ಕಾರ್ಯಕರ್ತೆಯೊಬ್ಬರು ಗ್ರಾಮಗಳಲ್ಲಿ ಕೊವಿಡ್ ಲಸಿಕೆಯ ಬಗ್ಗೆ ಜನರ ತಿಳುವಳಿಕೆ ಹೇಗಿದೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.
ನಮ್ಮ ಮಾತನ್ನು ಜನರು ಕೇಳ್ತಾ ಇಲ್ಲ ಸರ್, ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಿ ಎಂದು ನಾವು ಮನವಿ ಮಾಡ್ತಿದ್ದೇವೆ. ಆದ್ರೆ.. ನಾವು ಲಸಿಕೆ ಹಾಕಿಸಿ ಕೊಂಡ್ರೆ ನಿಮಗೆ ಲಾಭ ಇದೆ ಅದಕ್ಕೆ ನೀವು ಬರ್ತೀರಿ… ನಾವು ಲಸಿಕೆ ಹಾಕಿಸಿಕೊಳ್ಳಲ್ಲ, ನೀವು ಒತ್ತಾಯ ಮಾಡಿದ್ರೆ, ನಾವು ಆತ್ಮಹತ್ಯೆ ಮಾಡಿಕೊಳ್ತೀವಿ ಎಂದು ಬೆದರಿಸುತ್ತಾರೆ ಎಂದು ದೂರಿದ್ದಾರೆ ಎಂದು ವರದಿಯಾಗಿದೆ.