ಕೊರೊನಾ ಲಸಿಕೆಯಿಂದ ಆರಂಭವಾದ ಕೈ ನೋವು: ನೊಂದ ಯುವಕನಿಂದ ಆತ್ಮಹತ್ಯೆ
11/10/2022
ಕಾರ್ಕಳ: ಕೊರೊನಾ ಲಸಿಕೆ ನೀಡಿರುವ ಪರಿಣಾಮ ಕೈ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಕೌಡೂರು ಗ್ರಾಮದ ತಡ್ಪೆದೋಟ ಎಂಬಲ್ಲಿ ಅ.10ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಕೌಡೂರು ಗ್ರಾಮದ ತಡ್ಪೆದೋಟ ನಿವಾಸಿ ಪ್ರದೀಪ್ ಪೂಜಾರಿ (37) ಎಂದು ಗುರುತಿಸಲಾಗಿದೆ. ಕಳೆದ ವರ್ಷ ಕೊರೋನಾ ಸಂದರ್ಭ ಇವರ ಕೈಗೆ ಲಸಿಕೆ ನೀಡಿದ್ದು ಇದರಿಂದ ಕೈ ನೋವುಂಟಾಗಿ ಸರಿಯಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ.
ಇದರಿಂದ ಮಾನಸಿಕ ನೊಂದ ಅವರು ಮನೆಯ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka