ಮೊರಾದಾಬಾದ್‌ನ ಐಷಾರಾಮಿ ಟಿಡಿಐ ಸಿಟಿ ಹೌಸಿಂಗ್ ಸೊಸೈಟಿಯಲ್ಲಿ ತಡರಾತ್ರಿ ಪ್ರತಿಭಟನೆ - Mahanayaka

ಮೊರಾದಾಬಾದ್‌ನ ಐಷಾರಾಮಿ ಟಿಡಿಐ ಸಿಟಿ ಹೌಸಿಂಗ್ ಸೊಸೈಟಿಯಲ್ಲಿ ತಡರಾತ್ರಿ ಪ್ರತಿಭಟನೆ

05/12/2024

ಉತ್ತರ ಪ್ರದೇಶದ ಮೊರಾದಾಬಾದ್‌ನ ಐಷಾರಾಮಿ ಟಿಡಿಐ ಸಿಟಿ ಹೌಸಿಂಗ್ ಸೊಸೈಟಿಯಲ್ಲಿ ಮಂಗಳವಾರ ತಡರಾತ್ರಿ ಪ್ರತಿಭಟನೆ ನಡೆದಿದೆ. ಇದಕ್ಕೆ ಕಾರಣ ಹಿಂದೂ ಬಹುಸಂಖ್ಯಾತ ಕಾಲೋನಿಯಲ್ಲಿನ ಮನೆಯನ್ನು ಮುಸ್ಲಿಂ ವೈದ್ಯರಿಗೆ ಮಾರಾಟ ಮಾಡಿರುವುದು. ಮುಸ್ಲಿಂ ವ್ಯಕ್ತಿಗೆ ಮನೆ ಮಾರಾಟ ಮಾಡದಂತೆ ವಿರೋಧ ವ್ಯಕ್ತಪಡಿಸಿ ಈ ದಕ ಡಿ ಸೊಸೈಟಿʼಯಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಐಷಾರಾಮಿ ಟಿಡಿಐ ಸೊಸೈಟಿಯಲ್ಲಿ ಡಾ. ಅಶೋಕ್ ಬಜಾಜ್ ಎಂಬವರು ತನ್ನ ಮನೆಯನ್ನು ವೈದ್ಯರಾದ ಡಾ.ಇಕ್ರಾ ಚೌಧರಿಯವರಿಗೆ ಮಾರಾಟ ಮಾಡಿದ್ದಾರೆ. ಇಲ್ಲಿನ ಮನೆಗಳನ್ನು ಮುಸ್ಲಿಮರಿಗೆ ಮಾರಾಟ ಮಾಡಬಾರದೆಂದು ಹೌಸಿಂಗ್ ಸೊಸೈಟಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ನಿವಾಸಿಗಳು ಕಾಲೋನಿ ಗೇಟ್‌ ನಲ್ಲಿ ʼಅಶೋಕ್ ಬಜಾಜ್ ನಿಮ್ಮ ಮನೆಯನ್ನು ವಾಪಾಸ್ಸು ಪಡೆದುಕೊಳ್ಳಿʼ ಎಂಬ ಬ್ಯಾನರ್‌ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಇದು ಹಿಂದೂ ಸಮಾಜ ವಾಸಿಸುವ ಕಾಲೋನಿಯಾಗಿದೆ. 400ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಅನ್ಯ ಸಮುದಾಯದವರು ಇಲ್ಲಿ ನೆಲೆಸುವುದಕ್ಕೆ ನಮ್ಮ ವಿರೋಧವಿದೆ. ಮನೆಯು ದೇವಸ್ಥಾನದ ಸಮೀಪವಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಮುಸ್ಲಿಮರಿಗೆ ಮನೆ ಮಾರಾಟ ಮಾಡುವುದರಿಂದ ಕಾಲೋನಿಯ ಸ್ವರೂಪ ಬದಲಾಗಬಹುದು. ಇತರ ಸಮುದಾಯಗಳು ಅಲ್ಲಿ ಬಂದು ನೆಲೆಸಲು ಪ್ರಾರಂಭಿಸಿದರೆ, ಹಿಂದೂಗಳು ಕಾಲೋನಿ ಬಿಡಲು ಪ್ರಾರಂಭಿಸಿದರೆ ಅನಗತ್ಯವಾಗಿ ಬದಲಾವಣೆಯಾಗಬಹುದು ಎಂದು ನಾವು ಭಯಪಡುತ್ತೇವೆ ಎಂದು ಅಲ್ಲಿನ ನಿವಾಸಿ ಹೇಳಿದ್ದಾರೆ.

ಮೊರಾದಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಸಿಂಗ್ ದೂರು ಸ್ವೀಕರಿಸಿರುವುದನ್ನು ಖಚಿತಪಡಿಸಿದ್ದಾರೆ. “ನಾವು ಪರಿಸ್ಥಿತಿಯನ್ನು ಅರಿತು ಶಾಂತಿಯುತವಾಗಿ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇವೆ. ಕೋಮು ಸೌಹಾರ್ದ ಕಾಪಾಡುವುದನ್ನು ಖಚಿತಪಡಿಸಿಕೊಳ್ಳಲು ಆಡಳಿತ ಮತ್ತು ಪೊಲೀಸರು ಎರಡೂ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ” ಎಂದು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ