ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಕೂಟದ ಫಲಿತಾಂಶ
ಕಾರ್ಕಳ: ಇಲ್ಲಿನ ಮಿಯ್ಯಾರಿನಲ್ಲಿ ನಡೆದ 18ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಕೂಟವು ಭಾನುವರ ಸಂಪನ್ನವಾಗಿದೆ.
ಶನಿವಾರ ಬೆಳಗ್ಗೆ ಇಂಧನ ಸಚಿವ ವಿ.ಸುನೀಲ್ ಕುಮಾರ್, ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾದ ಪ್ರಧಾನ ಅರ್ಚಕ ಹರಿದಾಸ್ ಭಟ್ ಅವರಿಂದ ಉದ್ಘಾಟನೆಗೊಂಡ 18ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ ಭಾನುವಾರ ಮುಕ್ತಾಯಗೊಂಡಿದ್ದು, ಕಂಬಳದದಲ್ಲಿ ಒಟ್ಟು 177 ಜೊತೆ ಕೋಣ ಪಾಲ್ಗೊಂಡಿದ್ದವು.
ಕಂಬಳ ಫಲಿತಾಂಶ ಈ ಕೆಳಗಿನಂತಿದೆ.
ಕನಹಲಗೆ
ಪ್ರಥಮ: ವಾಮಂಜೂರು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವಾ (ಹಲಗೆ ಮೆಟ್ಟಿದವರು ಬೈಂದೂರು ಭಾಸ್ಕರ್ ದೇವಾಡಿಗ)
ದ್ವಿತೀಯ: ಬೇಲಾಡಿ ಬಾವ ಆಶೋಕ್ ಶೆಟ್ಟಿ (ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ)
ಹಗ್ಗ ಹಿರಿಯ
ಪ್ರಥಮ: ಪದವು ಕಾನಡ್ಕ ಪ್ಲೇವಿ ಡಿ.ಸೋಜಾ ಎ. (ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)
ದ್ವಿತೀಯ ಪದವು ಕಾನಡ್ಕ ಪ್ಲೇವಿ ಡಿ.ಸೋಜಾ ಬಿ. (ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)
ಹಗ್ಗ ಕಿರಿಯ
ಪ್ರಥಮ: ನೂಜಿಪಾಡಿ ಪ್ರಣಮ್ ಕುಮಾರ್ (ಓಡಿಸಿದವರು: ಪಣಪೀಲ ಪ್ರವೀಣ್ ಕೋಟ್ಯಾನ್)
ದ್ವಿತೀಯ: ಅಲ್ಲಿಪಾದೆ ಕೇದಗೆ ದೇಸಯ್ಯ ವಿಜಯ ವಿ.ಕೋಟ್ಯಾನ್ (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ್ ಗೌಡ)
ಅಡ್ಡ ಹಲಗೆ
ಪ್ರಥಮ: ನಾರಾವಿ ರಕ್ಷೀತ್ ಯುವರಾಜ್ ಜೈನ್ (ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್)
ದ್ವಿತೀಯ: ಬೋಳಾರ ತ್ರಿಶಾಲ್ ಪೂಜಾರಿ (ಸಾವ್ಯ ಗಂಗಯ್ಯ ಪೂಜಾರಿ)
ನೇಗಿಲು ಹಿರಿಯ
ಪ್ರಥಮ: ಬೋಳದಗುತ್ತು ಸತೀಶ್ ಶಟ್ಟಿ ಬಿ. (ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ)
ದ್ವಿತೀಯ: ಶಿರ್ಲಾಲು ನಡಿಬೆಟ್ಟು ಪದ್ಮರಾಜ್ ಹೆಗ್ಡೆ (ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ)
ನೇಗಿಲು ಕಿರಿಯ
ಪ್ರಥಮ: ನಿಂಜೂರು ಮಾಳಿಗೆ ಮನೆ ಸುರೇಂದ್ರ ಹೆಗ್ಡೆ ( ಓಡಿಸಿದವರು: ಎರಿಂಜೆ ಪ್ರಮೋದ್ ಕೋಟ್ಯಾನ್)
ದ್ವಿತೀಯ: ಬೈಂದೂರು ತಗ್ಗರ್ಸೆ ನೀಲಕಂಠ ಹುದಾರ್ (ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್)
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದು ‘ಕನ್ನಡಿಗರ ವಿಕೃತ ಮನಸ್ಥಿತಿ’: ಉದ್ದವ್ ಠಾಕ್ರೆ
‘ವೀರ ಸಾವರ್ಕರ್’ ಪುಸ್ತಕ ಬಿಡುಗಡೆ: ಅಂಬೇಡ್ಕರ್ ಹಾಗೂ ಸಾವರ್ಕರ್ ನಡುವೆ ಉತ್ತಮ ಸಂಬಂಧವಿತ್ತು | ಬಿ.ಎಲ್.ಸಂತೋಷ್
ಆಟೋ ಮೇಲೆ ಮಗುಚಿ ಬಿದ್ದ ಬೃಹತ್ ಕಂಟೈನರ್: ನಾಲ್ವರ ದಾರುಣ ಸಾವು