ಕಡಿಮೆ ರಕ್ತದ ಒತ್ತಡದಿಂದ ಉಪನ್ಯಾಸಕಿ ಸಾವು: ಸಚಿವ ಜಮೀರ್ ಅಹಮದ್ ಖಾನ್ ಸಂತಾಪ - Mahanayaka
7:48 PM Saturday 22 - February 2025

ಕಡಿಮೆ ರಕ್ತದ ಒತ್ತಡದಿಂದ ಉಪನ್ಯಾಸಕಿ ಸಾವು: ಸಚಿವ ಜಮೀರ್ ಅಹಮದ್ ಖಾನ್ ಸಂತಾಪ

zameer ahmed khan
13/08/2023

ಬೆಂಗಳೂರು : ಚಿಕ್ಕಬಳ್ಳಾಪುರದ ಮಾಸ್ತೇನಹಳ್ಳಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ಪಿಯು ಕಾಲೇಜಿನ ಆಂಗ್ಲ ಉಪನ್ಯಾಸಕಿ ನೀಲಾಂಬಿಕೆ (35) ಕಡಿಮೆ ರಕ್ತದ ಒತ್ತಡದಿಂದ ಮೃತ ಪಟ್ಟಿದ್ದು ವಸತಿ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಬೀದರ್ ಜಿಲ್ಲೆ ಭಾಲ್ಕಿ ಮೂಲದವರಾದ ನೀಲಾಂಬಿಕೆ ಅವರ ಪಾರ್ಥಿವ ಶರೀರ ಕುಟುಂಬ ಸದಸ್ಯರಿಗೆ ತಲುಪಿಸಲು ಇಲಾಖೆ ಅಧಿಕಾರಿಗಳು ಖುದ್ದು ತೆರಳಲು ಹಾಗೂ ಎಲ್ಲ ರೀತಿಯ ವ್ಯವಸ್ಥೆ ಮಾಡಲು ಸಚಿವರು ಸೂಚನೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ