ಆಟೋ ನಿಲ್ದಾಣದಲ್ಲಿ ಕಾನೂನು ಮಾಹಿತಿ ಸಾರ್ವಜನಿಕ ಸಭೆ
ದೇರಳಕಟ್ಟೆ: ಆಟೋ ನಿಲ್ದಾಣದಲ್ಲಿ ಕಾನೂನು ಮಾಹಿತಿ ಸಾರ್ವಜನಿಕ ಸಭೆ ಆಗಸ್ಟ್ 6 ರಂದು ನಡೆಯಿತು. ಕಾನೂನು ಅಧಿಕಾರಿ ಉಪನಿರೀಕ್ಷಕರು ವಿಜಯ ರೈ ಕಾನೂನು ಸಲಹೆಗಳನ್ನು ನೀಡಿದರು. ನೀವೆಲ್ಲರು ಸಂಘಟಿತರಾಗಿರಬೇಕು ಯಾಕೆಂದರೆ ಸಂಘಟಿತರಲ್ಲಿ ಬಲವಿದೆ ಎಂಬುದನ್ನು ತೋರಿಸುತ್ತದೆ ಎಂಬ ಮಾಹಿತಿ ನೀಡಿದರು.
ಸಹಾಯಕ ಉಪ ನಿರೀಕ್ಷಕರು ಸಂತೋಷ್ ಪಾಡಿ ಮಾತನಾಡುತ್ತಾ, ನಿಮ್ಮ ದಾಖಲೆಗಳನ್ನು ಸರಿಯಾಗಿ ಜಾಗೃತೆಯಿಂದ ಇಟ್ಟುಕೊಳ್ಳಿ. ನಿಮ್ಮ ಜೊತೆ ಯಾವಾಗಲೂ ಕಾನೂನು ಇರುತ್ತದೆ. ನಾವು ಹಾಕುವ ಖಾಕಿ ಬಟ್ಟೆ ಕಾನೂನು ಕಾಯಲು ಇರುವುದು. ನೀವು ಹಾಕುವ ಖಾಕಿ ಬಟ್ಟೆ ಸಾರ್ವಜನಿಕರಿಗೆ ಸಹಾಯ ಮಾಡಲು. ಹಾಗೆ ನಮ್ಮ ಮತ್ತು ನಿಮ್ಮ ಖಾಕಿ ಬಟ್ಟೆಗೆ ಬೇರೇನು ವ್ಯತ್ಯಾಸವಿಲ್ಲ. ಅದು ಒಂದೇ ರೀತಿ. ನಾವು ಕೂಡ ಸಾರ್ವಜನಿಕರ ಪರವಾಗಿ ಇರುವುದು, ನೀವು ಕೂಡ ಸಾರ್ವಜನಿಕರ ಪರವಾಗಿಯೇ ಇರುವುದು ಎಂದರು.
ಕೃಷ್ಣಪ್ಪ ಸಾಲ್ಯಾನ್ ರವರು ರಿಕ್ಷಾ ಚಾಲಕರ ಬಗ್ಗೆ ಉತ್ತಮ ಅಭಿಪ್ರಾಯ ಕೊಟ್ಟರು. ಏನಾದರೂ ಆಕಸ್ಮಿಕ ನಡೆದರೆ ರಿಕ್ಷಾ ಚಾಲಕರೇ ಮೊದಲಿಗೆ ಹತ್ತಿರ ಬರುವುದು, ಯಾವ ರಾಜಕೀಯ ವ್ಯಕ್ತಿಯೂ ಬರುವುದಿಲ್ಲ ಎಂದು ಹೇಳಿದರು.
ಸಿಐಟಿಯು ತಾಲೂಕು ಅಧ್ಯಕ್ಷರು ಸುಂದರ ಕುಂಪಲ, ಎಆರ್ ಡಿಯು ತಾಲೂಕು ಕಾರ್ಯದರ್ಶಿ ಇಬ್ರಾಹಿಂ ಮದಕ, ಎಫ್ ಕೆಎಆರ್‌ಡಿಯು ತಾಲೂಕು ಅಧ್ಯಕ್ಷರು ಮುಸ್ತಕ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅನ್ಸಾರ್, ರೈತ ಸಂಘ ರಾಜ್ಯ ಮುಖಂಡರು ಕೃಷ್ಣಪ್ಪ ಸಾಲ್ಯಾನ್, ರಿಕ್ಷಾ ನಿಲ್ದಾಣದ ಅಧ್ಯಕ್ಷರು ಅಮೀರ್ ಬದ್ಯಾರ್, ಸರ್ವಸದಸ್ಯರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: