ಗಾಝಾದ ನೊಂದ ಮಕ್ಕಳಿಗೆ ಮಿಡಿದ ಮನ: ಐದೂವರೆ ಕೋಟಿ ನೀಡಲು ಖ್ಯಾತ ಫುಟ್ಬಾಲ್ ಆಟಗಾರ ತೀರ್ಮಾನ
ಗಾಝಾದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಮಕ್ಕಳ ನೆರವಿಗೆ ಪೊಲೆಂಡ್ ನ ಖ್ಯಾತ ಫುಟ್ಬಾಲರ್ ಅನ್ವರ್ ಅಲ್ ಗಾಝಿ ಮುಂದೆ ಬಂದಿದ್ದಾರೆ. ಸುಮಾರು ಐದೂವರೆ ಕೋಟಿ ರೂಪಾಯಿಯನ್ನು ಈ ಮಕ್ಕಳಿಗಾಗಿ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಗಾಝಾಕ್ಕೆ ಬೆಂಬಲ ಸೂಚಿಸಿದ ಕಾರಣಕ್ಕಾಗಿ ಈ ಮೊದಲು ಜರ್ಮನಿಯ ಬೂoಡಾಸ್ ಲೀಗ್ ಕ್ಲಬ್ಆದ ಮೈನ್ಸ್ ಇವರನ್ನು ಹೊರಹಾಕಿತ್ತು.
ಮೈನ್ಸ್ ಕ್ಲಬ್ಬು ತನಗೆ ನೀಡಬೇಕಾದ ಮೊತ್ತದಿಂದ ದೊಡ್ಡದೊಂದು ಭಾಗವನ್ನು ಇವರು ಇದೀಗ ಸಂತ್ರಸ್ತ ಮಕ್ಕಳಿಗೆ ನೆರವಾಗಿ ನೀಡಿದ್ದಾರೆ. ಎರಡು ಕಾರಣಗಳಿಗಾಗಿ ನಾನು ನನ್ನ ಮೈನ್ಸ್ ಕ್ಲಬ್ ಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ಒಂದನೇದಾಗಿ ನನಗೆ ನೀಡಬೇಕಾದ ಭಾರಿ ಮೊತ್ತದ ಹಣಕ್ಕಾಗಿ ನಾನು ಧನ್ಯವಾದ ಸಲ್ಲಿಸುತ್ತೇನೆ.
ಅದರಿಂದ ಸುಮಾರು 5 ಕೋಟಿಯನ್ನು ನಾನು ಗಾಜಾದ ಮಕ್ಕಳಿಗೆ ನೀಡುತ್ತೇನೆ. ಎರಡನೇಯದಾಗಿ ಅವರು ನನ್ನ ಧ್ವನಿಯನ್ನು ನಿಶಬ್ದಗೊಳಿಸಲು ಪ್ರಯತ್ನಿಸಿದ್ರು. ಆದರೆ ಗಾಝಾದ ಮಕ್ಕಳಿಗಾಗಿ ನಾನು ಇನ್ನಷ್ಟು ಜೋರಾಗಿ ಧ್ವನಿ ಎತ್ತಲು ಈ ಕ್ಲಬ್ಬಿನಿಂದ ಹೊರ ಹಾಕಿದ್ದು ನನಗೆ ಪ್ರೇರಣೆಯಾಯಿತು ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth