ಭಯಾನಕ: ಇದ್ದಕ್ಕಿದ್ದಂತೆ ದಾಳಿ ಮಾಡಿ ವೃದ್ದೆಯ ರುಂಡ, ಮುಂಡವನ್ನು ಬಿಡದೇ ತಿಂದ ಚಿರತೆ..!

05/07/2023

ವೃದ್ದೆಯ ಮೇಲೆ ಚಿರತೆಯೊಂದು ದಾಳಿ ಮಾಡಿದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ದುಧ್ವಾ ಬಫರ್ ವಲಯದ ಧೌರಾಹ್ರಾ ಅರಣ್ಯ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ರಾಮನಗರ ಬಾಘಾ ಗ್ರಾಮದ ನಿವಾಸಿ ರಾಮಕಾಲಿ, ಚಿರತೆ ದಾಳಿಗೆ ಬಲಿಯಾದ ವೃದ್ದೆ.

ದಾಳಿಯ ಕ್ರೂರತೆ ಎಷ್ಟಿತ್ತೆಂದರೆ ವೃದ್ದೆಯ ರುಂಡ, ಮುಂಡ ಬೇರೆಯಾಗಿದೆ. ಮುಖವನ್ನು ಚಿರತೆ ತಿಂದು ಹಾಕಿದೆ.

ಧೌರಾಹ್ರಾ ಅರಣ್ಯ ಪ್ರದೇಶದಲ್ಲಿ ಈ ಮಧ್ಯೆ ಚಿರತೆಗಳ ಓಡಾಟ ಹೆಚ್ಚಾಗಿದ್ದು, ಕೆಲವು ದಿನಗಳ ಜನರು ಎಚ್ಚರದಿಂದ ಇರಲು ಅಲ್ಲಿನ ಅಧಿಕಾರಿಗಳು ಸೂಚಿಸಿದ್ದಾರೆ.

ಜಮೀನಿನ ಕೆಲಸ ಮುಗಿಸಿಕೊಂಡು ಬಂದ ವೃದ್ಧೆ ರಾಮಕಾಲಿ ಅಲ್ಲಿಯೇ ಇದ್ದ ಗುಡಿಸಲಿನಲ್ಲಿ ಮಲಗಿದ್ದಾಗ ಚಿರತೆ ದಾಳಿ ಮಾಡಿದ್ದು, ಕುತ್ತಿಗೆಯನ್ನು ಬಾಯಿಯಿಂದ ಹಿಡಿದುಕೊಂಡಿದೆ. ಇದರಿಂದ ಮಹಿಳೆ ಒದ್ದಾಡಿದ್ದು, ಪಕ್ಕದಲ್ಲಿದ್ದ ಪುತ್ರ ಇದನ್ನು ಕಂಡು ಸಹಾಯಕ್ಕಾಗಿ ಕೂಗಿದ್ದಾನೆ. ನೆರೆಹೊರೆಯವರ ಸಹಾಯದಿಂದ ಚಿರತೆಯನ್ನು ಕಾಡಿಗೆ ಓಡಿಸಿದ್ದಾರೆ.

ಆದರೆ, ಅಷ್ಟರಲ್ಲಿ ವೃದ್ಧೆ ಉಸಿರುಗಟ್ಟಿ ಸಾವನ್ನಪ್ಪಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAwSe


ವಿಡಿಯೋ ನೋಡಿ:

 

ಇತ್ತೀಚಿನ ಸುದ್ದಿ

Exit mobile version