ಸಲಿಂಗಿ ಯುವತಿಯರಿಗೆ ಜೊತೆಯಾಗಿ ಬದುಕಲು ಅನುಮತಿ ನೀಡಿದ ನ್ಯಾಯಾಲಯ
ಲಕ್ನೋ: ಸಲಿಂಗಿ ಯುವತಿಯರಿಬ್ಬರು ಜೊತೆಯಾಗಿ ಬದುಕಲು ರಾಂಪುರ ನ್ಯಾಯಾಲಯ ಅವಕಾಶ ನೀಡಿದ್ದು, ಯುವತಿಯರ ಪೋಷಕರು ನೀಡಿದ ದೂರಿನ ವಿಚಾರಣೆ ನಡೆಸಿದ ಬಳಿಕ ಈ ರೀತಿಯ ಅನುಮತಿ ನೀಡಲಾಗಿದ್ದು, ಪ್ರೌಢ ವಯಸ್ಸಿನ ಯುವತಿಯರು ತಮ್ಮ ಇಷ್ಟದಂತೆ ಜೊತೆಯಾಗಿ ಬದುಕಬಹುದು ಎಂದು ಹೇಳಿದೆ.
ಸುಮಾರು 20 ವರ್ಷ ವಯಸ್ಸಿನ ಯುವತಿ ರಾಂಪುರದ ಶಹಬಾದ್ ಪ್ರದೇಶದಲ್ಲಿರುವ ತನ್ನ ಗೆಳತಿಯ ಜೊತೆಗೆ ತಂಗಿದ್ದಳು. ಈ ಸಂಬಂಧ ಯುವತಿಯ ಪೋಷಕರು ಜುಲೈನಲ್ಲಿ ನಮ್ಮ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು.
ಇದಾದ ಬಳಿಕ ಯುವತಿ ಶಹಬಾದ್ ನಲ್ಲಿ ಪತ್ತೆಯಾಗಿದ್ದಳು. ತನ್ನ ಇಷ್ಟದಂತೆ ತಾನು ಸ್ನೇಹಿತೆಯೊಂದಿಗೆ ಇರಲು ಬಯಸಿದ್ದೇನೆ. ಹಾಗಾಗಿ ಮನೆ ಬಿಟ್ಟು ಬಂದಿದ್ದೇನೆ ಎಂದು ಆಕೆ ಹೇಳಿದ್ದಳು. ಈ ವೇಳೆ ತಮ್ಮ ಪುತ್ರ ಅಪ್ರಾಪ್ತ ವಯಸ್ಸಿನವಳು ಎಂದು ಪೋಷಕರು ವಾದಿಸಿದ್ದರು.
ಆದರೆ ಯುವತಿಯು, ತನಗೆ 20 ವರ್ಷ ವಯಸ್ಸಾಗಿದೆ ಎಂದು ಪ್ರಮಾಣ ಪತ್ರ ತೋರಿಸಿದ್ದಾಳೆ. ಆದರೂ ಮನೆಯವರು ಸಂಧಾನ ನಡೆಸಲು ಯತ್ನಿಸಿದ್ದಾರೆ. ಆದರೆ ಯುವತಿ ನಿರಾಕರಿಸಿದ್ದಳು. ಇದೀಗ ರಾಂಪುರ ನ್ಯಾಯಾಲಯವು ಇಬ್ಬರು ಯುವತಿಯರಿಗೆ ಜೊತೆಯಾಗಿ ವಾಸಿಸಲು ಅವಕಾಶ ನೀಡಿದೆ.
ಇನ್ನಷ್ಟು ಸುದ್ದಿಗಳು…
ಅಫ್ಘಾನ್ ನಲ್ಲಿ ತಾಲಿಬಾನಿಗಳ ವಿಜಯ: ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು | ತಜ್ಞರ ಎಚ್ಚರಿಕೆ
ತನ್ನ ಬಯಕೆ ಈಡೇರಲಿಲ್ಲ ಎಂದು ಪತ್ನಿಯ ಮೇಲೆ ಬಿಸಿ ನೀರು ಎರಚಿದ ಪಾಪಿ ಪತಿ!
ವಧುವರರಿಗೆ 5 ಲೀಟರ್ ಪೆಟ್ರೋಲ್ ಗಿಫ್ಟ್ ಕೊಟ್ಟು ಹಾಸ್ಯನಟ ನೀಡಿದ ಸಲಹೆ ಏನು ಗೊತ್ತಾ?
ರೈತ ಹೋರಾಟಗಾರರ ಬಗ್ಗೆ ಹಗುರವಾಗಿ ನಾಲಿಗೆ ಹರಿಬಿಟ್ಟ ಶೋಭಾ ಕರಂದ್ಲಾಜೆ ಜಿಲ್ಲೆಗೆ ಕಳಂಕ: ಕ್ಯಾಂಪಸ್ ಫ್ರಂಟ್
ಡೆತ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆ! | ಆತಂಕದಲ್ಲಿ ಸಂಬಂಧಿಕರು