ಕುಸುಮಾರನ್ನು ಗೆಲ್ಲಿಸೋದು ಯಾಕೆ? ಬೇಕಿದ್ರೆ ನನ್ನ ವಿರುದ್ಧ ಡಿಕೆಶಿ, ಡಿ.ಕೆ.ಸುರೇಶ್ ಸ್ಪರ್ಧಿಸಲಿ: ಮುನಿರತ್ನ  ಸವಾಲು - Mahanayaka
1:13 AM Wednesday 11 - December 2024

ಕುಸುಮಾರನ್ನು ಗೆಲ್ಲಿಸೋದು ಯಾಕೆ? ಬೇಕಿದ್ರೆ ನನ್ನ ವಿರುದ್ಧ ಡಿಕೆಶಿ, ಡಿ.ಕೆ.ಸುರೇಶ್ ಸ್ಪರ್ಧಿಸಲಿ: ಮುನಿರತ್ನ  ಸವಾಲು

munirathna
20/02/2023

ಬೆಂಗಳೂರು: ನನ್ನ ವಿರುದ್ಧ ಡಿ.ಕೆ.ಶಿವಕುಮಾರ್  ಹಾಗೂ ಸಂಸದ ಡಿ.ಕೆ.ಸುರೇಶ್ ಇಬ್ಬರೂ ಬಂದು ಸ್ಪರ್ಧೆ ಮಾಡಲಿ ಎಂದು ಸಚಿವ ಮುನಿರತ್ನ  ಸವಾಲು ಹಾಕಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಆರ್.ನಗರದಲ್ಲಿ ಕುಸುಮಾರನ್ನು ಗೆಲ್ಲಿಸೋದು ಯಾಕೆ? ಬೇಕಿದ್ರೆ ನನ್ನ ವಿರುದ್ಧ ಡಿಕೆಶಿ ಹಾಗೂ ಸಂಸದ ಡಿ.ಕೆ.ಸುರೇಶ್ ಇಬ್ಬರೂ ಬಂದು ಸ್ಪರ್ಧೆ ಮಾಡಲಿ. ಒಬ್ಬರು ಯಾಕೆ, ಇಬ್ಬರೂ ಬಂದು ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಈಗಾಗಲೇ ಈ ಹಿಂದೆ ಬಂದು ಎಷ್ಟು ಅಂತರದಿಂದ ಸೋತಿದ್ದಾರೆ ಎಂಬುದು ಗೊತ್ತಿದೆಯಲ್ಲ. ಚುನಾವಣೆ ಸಂದರ್ಭ, ಏನೇನೋ ಕದ್ದ ಅಂತಾ ವಿರುದ್ಧ ಆರೋಪ ಮಾಡುತ್ತಾರೆ. ಬೇಕಿದ್ದರೆ ಮೆಟ್ರೋ ಕದ್ದ ಅಂತಲೂ ಹೇಳುತ್ತಾರೆ. ಮುಂದೆ ಇನ್ನೂ ಜಾಸ್ತಿ ಆರೋಪ ಮಾಡುತ್ತಾರೆ. ಇದಕ್ಕೆಲ್ಲ ಯಾರೂ ತಲೆಕೆಡಿಸಿಕೊಳ್ಳಲ್ಲ ಎಂದರು.

ಕೋಲಾರದಲ್ಲಿ ಮುನಿರತ್ನ ಸ್ಪರ್ಧೆ ಮಾಡ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ವರಿಷ್ಠರು ಹೇಳಿದರೆ ಕೋಲಾರದಲ್ಲಿ ಸ್ಪರ್ಧೆಗೆ ಸಿದ್ಧನಿದ್ದೇನೆ. ನನ್ನ ಪಕ್ಷ ಎಲ್ಲಿ ಹೋಗು ಎನ್ನುತ್ತಾರೋ ಅಲ್ಲೇ ಹೋಗಿ ಸ್ಪರ್ಧೆ ಮಾಡ್ತೇನೆ. ಪಕ್ಷ ದೊಡ್ಡದು. ಹೀಗಾಗಿ ಪಕ್ಷದ ಸೂಚನೆ ಪಾಲಿಸುತ್ತೇನೆ. ಕೋಲಾರಕ್ಕೆ ಹೋಗು ಅಂದ್ರೆ ಹೋಗುತ್ತೇನೆ. ಬೇರೆ ಕ್ಷೇತ್ರಕ್ಕೆ ಹೋಗು ಅಂದ್ರೂ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. 265 ಕಡೆ ಜನೌಷಧ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರದ ಮೂಲಕ ಸಾರ್ವಜನಿಕರಿಗೆ ಸೌಲಭ್ಯ ತಲುಪಿಸುವ ಕೆಲಸ ಆಗಲಿದೆ. ಅಂತಾರಾಷ್ಟ್ರೀಯ ಮಟ್ಟದ ಸೂಚ್ಯಂಕದಲ್ಲಿ 25 ನಗರದಲ್ಲಿ ಬೆಂಗಳೂರಿನ ಹೆಸರಿದೆ. ಜನತೆಗೆ ಇನ್ನೂ ಹತ್ತಿರವಾಗಲು ಏನೆಲ್ಲಾ ಕಾರ್ಯಕ್ರಮ ರೂಪಿಸಬೇಕು ಅಂತ ಪಟ್ಟಿ ಮಾಡಿದ್ದೇವೆ. ಎಂಟು ಸಾವಿರ ರಾಜಕಾಲುವೆಗೆ, 110 ಹಳ್ಳಿಗಳ ರಸ್ತೆಗೆ 9 ಸಾವಿರ ಕೋಟಿ ಹಣ ನೀಡಿದ್ದಾರೆ. ಇಷ್ಟು ಹಣವನ್ನು ಯಾವ ಸರ್ಕಾರ ಕೂಡ ನೀಡಿರಲಿಲ್ಲ. ಐದು ಸಾವಿರ ಕೋಟಿ ವೆಚ್ಚದಲ್ಲಿ 775 ಎಂಎಲ್‍ ಡಿ ನೀರು ತರಲು ಕ್ರಮ ಕೈಗೊಂಡಿದ್ದೇವೆ. 775 ಎಂಎಲ್‍ ಡಿ ನೀರನ್ನು ತರುವುದರಿಂದ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ