ಇನ್ನು ಮುಂದೆ ಒಳ್ಳೆಯದು ಮಾಡೋಣ: ಮುರುಘಾಶ್ರೀ - Mahanayaka

ಇನ್ನು ಮುಂದೆ ಒಳ್ಳೆಯದು ಮಾಡೋಣ: ಮುರುಘಾಶ್ರೀ

murugha shree
16/11/2023

ದಾವಣಗೆರೆ:  ಪೋಕ್ಸೊ ಪ್ರಕರಣದಲ್ಲಿ ಕಳೆದ 14 ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ  ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣ ಜೈಲಿನಿಂದ ಬಿಡುಗಡೆಯಾಗಿದ್ದು, ಚಿತ್ರದುರ್ಗದಿಂದ ದಾವಣಗೆರೆಗೆ ಆಗಮಿಸಿದರು.

ಇದೇ ವೇಳೆ ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ಜಯದೇವ ಮುರುಘರಾಜೇಂದ್ರ ಸ್ವಾಮಿ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಗದ್ದುಗೆಗೆ  ಭೇಟಿ ನೀಡಿದರು.


ADS

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ವಿಚಾರಣೆ ನ್ಯಾಯಾಲಯದಲ್ಲಿ ಇರುವುದರಿಂದ ನಾನು ಏನೂ ಪ್ರತಿಕ್ರಿಯೆ ನೀಡುವುದಿಲ್ಲ, ಇನ್ನು ಮುಂದೆ ಒಳ್ಳೆಯದು ಮಾಡೋಣ, ಧನ್ಯವಾದ ಎಂದು ಹೇಳಿದರು.

ಬಳಿಕ ದೊಡ್ಡಪೇಟೆಯಲ್ಲಿರುವ ವಿರಕ್ತ ಮಠಕ್ಕೆ ಭೇಟಿ ನೀಡಿದ ಅವರು,  ದಾವಣಗೆರೆ ಭೇಟಿ ಹಿನ್ನೆಯಲ್ಲಿ ಶಿವಯೋಗಿ ಮಂದಿರದ ಆವರಣವನ್ನು ಸ್ವಚ್ಛಗೊಳಿಸಲಾಗಿತ್ತು. ಮುರುಘಾ ಶರಣ ಆಗಮಿಸುತ್ತಿದ್ದಂತೆಯೇ ಅವರ ಭಕ್ತರು ಜೈಕಾರ ಹಾಕಿ ಸ್ವಾಗತಿಸಿದರು.

ಇತ್ತೀಚಿನ ಸುದ್ದಿ